ಮುಲ್ಕಿ: ಹಳೆಯಂಗಡಿ ಗ್ರಾ.ಪಂ ವ್ಯಾಪ್ತಿಯ ಪಾವಂಜೆ ನಂದಿನಿ ನದಿ ಬದಿಯಲ್ಲಿ ತ್ಯಾಜ್ಯ ಸುರಿಯುತ್ತಿದ್ದ ವ್ಯಕ್ತಿಯೋರ್ವನನ್ನು ಹಳೆಯಂಗಡಿ ಪಂಚಾಯತ್ ಅಧ್ಯಕ್ಷರು ಸಹಿತ ಇತರೆ ಸಿಬ್ಬಂದಿ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕೊಲ್ನಾಡು ಮೂಲದ ಕೀರ್ತನ್ ಎಂಬವರು ಟಿಪ್ಪರ್ ನಲ್ಲಿ ಹೆದ್ದಾರಿ ಬದಿ ಸುರಿಯುತ್ತಿರುವ ವೇಳೆಯಲ್ಲಿ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಹಳೆಯಂಗಡಿ ಗ್ರಾಪಂ ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗ ಕೂಡಲೇ ರೆಡ್ ಹ್ಯಾಂಡಾಗಿ ಹಿಡಿದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಹೆದ್ದಾರಿ ಬದಿ ಅಕ್ರಮವಾಗಿ ಡಂಪಿಂಗ್ ಮಾಡಿದ ತ್ಯಾಜ್ಯ ಕೂಡಲೇ ತೆರವುಗೊಳಿಸಬೇಕು ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
Kshetra Samachara
07/02/2022 05:38 pm