ಮುಲ್ಕಿ:ಕಿನ್ನಿಗೋಳಿ ಸಮೀಪದ ಮೂರು ಕಾವೇರಿ ರಾಜ್ಯ ಹೆದ್ದಾರಿ ಜಂಕ್ಷನ್ನಲ್ಲಿ ಮುಲ್ಕಿ ಬಂಟರ ಸಂಘ ನೂತನ ಪದಾಧಿಕಾರಿಗಳ ಶುಭ ಕೋರಿದ ಬ್ಯಾನರನ್ನು ದುಷ್ಕರ್ಮಿಗಳು ಹಾನಿಯುಂಟು ಮಾಡಿದ್ದಾರೆ.
ಅದೇ ರೀತಿ ಸಮೀಪದಲ್ಲಿ ಕಿನ್ನಿಗೋಳಿಯ ವೀರಮಾರುತಿ ವ್ಯಾಯಾಮಶಾಲೆ ಸಂಘಟನೆಯು ಪೊಲೀಸ್ ಸಿಬ್ಬಂದಿ ವಿಜಯ ಕಾಂಚನ್ ರವರಿಗೆ ಶುಭ ಕೋರುವ ಫ್ಲೆಕ್ಸ್ ಗೂ ಹಾನಿ ಮಾಡಲಾಗಿದೆ.
ಮೂರುಕಾವೇರಿ ರಾಜ್ಯ ಹೆದ್ದಾರಿ ಬಳಿ ಫ್ಲೆಕ್ಸ್ ಹಾಕಿದ ಕೂಗಳತೆಯ ದೂರದಲ್ಲಿ ಸಿಸಿ ಕ್ಯಾಮರಾ ಇರುವುದರಿಂದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೂಡಲೇ ಮುಲ್ಕಿ ಪೊಲೀಸರು ಕಾರ್ಯಪ್ರವೃತ್ತರಾಗಿ ಫ್ಲೆಕ್ಸ್ ಗೆ ಹಾನಿಯುಂಟು ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
02/02/2022 07:48 pm