ಮಂಗಳೂರು: 5.52 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಸಹಿತ ಹೊನ್ನಾವರದ ಯುವಕ ಸೆರೆ

ಮಂಗಳೂರು: ಅಕ್ರಮವಾಗಿ ಮಂಗಳೂರಿನಿಂದ ದುಬೈಗೆ ವಿದೇಶಿ ಕರೆನ್ಸಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ 5.52 ಲಕ್ಷ ರೂ. ಮೌಲ್ಯದ ಕರೆನ್ಸಿ ವಶಪಡಿಸಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಮುಝಾಕಿತ್ ಅಹಮ್ಮದ್ ಫಕಿ ಅಹಮ್ಮದ್ ಬಂಧಿತ ಆರೋಪಿ. ಈತ ದುಬೈಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ತಪಾಸಣೆಗೆ ಒಳಪಡಿಸಿದ ಕಸ್ಟಮ್ಸ್ ಅಧಿಕಾರಿಗಳು ವಿದೇಶಿ ಕರೆನ್ಸಿ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಈತ ತನ್ನ ಒಳ ಉಡುಪಿನಲ್ಲಿ ಪೌಂಡ್ಸ್, ಡಾಲರ್ ಮತ್ತು ಕುವೈಟ್​ನ ದಿನಾರ್ ಕರೆನ್ಸಿಗಳನ್ನು ಬಚ್ಚಿಟ್ಟುಕೊಂಡು ಸಾಗಾಟ ಮಾಡುತ್ತಿದ್ದ. ಇದಕ್ಕೆ ಬೇಕಾದ ಯಾವುದೇ ದಾಖಲೆಗಳು ಈತನ ಬಳಿ ದೊರಕಿಲ್ಲ‌. ವಶಪಡಿಸಿಕೊಂಡ ಕರೆನ್ಸಿ ಮೌಲ್ಯ 5,52,678 ರೂ. ಆಗಿದೆ.

Kshetra Samachara

Kshetra Samachara

2 months ago

Cinque Terre

4.49 K

Cinque Terre

0