ಮುಲ್ಕಿ: ಮುಲ್ಕಿ ಟೂರಿಸ್ಟ್ ಕಾರು ಹಾಗೂ ಟೆಂಪೋ ಚಾಲಕ-ಮಾಲೀಕರ ಸಂಘದ ಸದಸ್ಯರು ಮಿಂಚಿನ ಕಾರ್ಯಾಚರಣೆಯಿಂದ ಖಾಸಗಿ ಕಾರಿನಲ್ಲಿ ಬಾಡಿಗೆ ಮಾಡುತ್ತಿದ್ದ ಪ್ರಯಾಣಿಕರ ಸಹಿತ ವಾಹನವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮುಲ್ಕಿ ಬೈಪಾಸ್ ನಿಂದ ಪುತ್ತೂರು ಸಮೀಪದ ಗೆಜ್ಜೆಗಿರಿ ಗೆ ಕೇವಲ 1500 ರೂ.ಗೆ ಬಾಡಿಗೆ ಮಾಡುತ್ತಿದ್ದ ಖಾಸಗಿ ಎರ್ಟಿಗಾ ಕಾರನ್ನು ಸಂಘದ ಸದಸ್ಯರು ಕಾರ್ಯಾಚರಣೆಯ ಮೂಲಕ ಹಿಡಿದು ಮುಲ್ಕಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಕಾರು ಉಡುಪಿ ಸಮೀಪದ ಹೆಜಮಾಡಿ ಪರಿಸರದ್ದು ಎಂದು ತಿಳಿದುಬಂದಿದೆ. ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಮಧು ಆಚಾರ್ಯ ಮಾತನಾಡಿ, ಅಕ್ರಮಗಳಿಗೆ ಯಾವತ್ತೂ ನಮ್ಮ ಸಂಘಟನೆಯಿಂದ ಬೆಂಬಲವಿಲ್ಲ. ನ್ಯಾಯಯುತವಾಗಿ ಬಾಡಿಗೆ ಮಾಡುವುದರ ಮೂಲಕ ಜೀವನ ಸಾಗಿಸಲು ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದರು.
ಸಂಘಟನೆಯ ಅಧ್ಯಕ್ಷ ಲತೀಶ್ ಕುಂದರ್, ಕಾರ್ಯದರ್ಶಿ ದೇವಣ್ಣ ನಾಯಕ್, ದೀಪು, ವೇದಾನಂದ ಶೆಟ್ಟಿ , ಸುಶಾಂತ್ ಮತ್ತಿತರರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Kshetra Samachara
25/02/2021 08:05 pm