ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಪುಂಜಾಲಕಟ್ಟೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು

ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಉರುವಾಲು ಎಂಬಲ್ಲಿ ಪೋಕ್ಸೋ ಪ್ರಕರಣವೊಂದು ದಾಖಲಾಗಿದ್ದು, ಆರೋಪಿ ಸಮದ್ ನೆಕ್ಕಿಲ್ ಎಂಬಾತನನ್ನು ಬಂಧಿಸಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಕೃತ್ಯ ನಡೆದಿದೆ ಎಂದು ದೂರಲಾಗಿದೆ.

ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದಿದ್ದ ಸಂದರ್ಭ ಆರೋಪಿ ಸಮದ್ ಮನೆ ರಿಪೇರಿ ಕೆಲಸವನ್ನು ಮಾಡಲು ಅಲ್ಲಿಗೆ ತೆರಳಿದ್ದು, ಆ ನೆಪದಲ್ಲಿ ಆಗಾಗ್ಗೆ ಬರುತ್ತಿದ್ದನು. ಈ ಸಂದರ್ಭ ಡಿಸೆಂಬರ್ ತಿಂಗಳ ಮೊದಲ ವಾರದ ರಾತ್ರಿಯ ವೇಳೆ ಮನೆಗೆ ಬಂದು ಬಾಲಕಿಯ ತಾಯಿಯನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿ, ಬಾಲಕಿಯ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್.ಐ. ಸೌಮ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

19/02/2021 11:00 am

Cinque Terre

9.13 K

Cinque Terre

0

ಸಂಬಂಧಿತ ಸುದ್ದಿ