ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಮತ್ತೆ ಹುಚ್ಚುನಾಯಿ ಉಪಟಳ; ಕಚ್ಚಲು ಬಂದಾಗ ಸ್ಥಳೀಯರ ಏಟಿಗೆ ಬಲಿ

ಬಂಟ್ವಾಳ: ಹುಚ್ಚು ನಾಯಿ ಕಾಟ ಜಾಸ್ತಿಯಾದಾಗ ಸ್ಥಳೀಯರೇ ಹೊಡೆದು ಕೊಂದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.

ವಿಟ್ಲದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಕಾಣಿಸಿಕೊಂಡ ಹುಚ್ಚು ನಾಯಿ ಸಾರ್ವಜನಿಕರನ್ನು ಓಡಿಸಿ, ಮಕ್ಕಳು ಸೇರಿದಂತೆ ಸುಮಾರು 6 ಜನರಿಗೆ ಕಚ್ಚಿ ಗಾಯಗೊಳಿಸಿದೆ. ಬಳಿಕ ಅಲ್ಲಿಂದ ವಿಟ್ಲ ಪೇಟೆಯ ಕಡೆಗೆ ಬಂದಿದ್ದು, ಈ ಬಗ್ಗೆ ಮಾಹಿತಿ ಅರಿತ ಫ್ರೆಂಡ್ಸ್ ವಿಟ್ಲ ತಂಡ ನಾಯಿಯನ್ನು ಹಿಡಿಯಲು ಸತತವಾಗಿ ಪ್ರಯತ್ನಿಸಿತು. ಆದರೆ ಮತ್ತೂ ನಾಯಿಯ ಆಟಾಟೋಪ ಜಾಸ್ತಿಯಾದಾಗ, ವಿಟ್ಲ ನಾಲ್ಕು ಮಾರ್ಗದ ಬಳಿ ಬಲವಾದ ಏಟಿಗೆ ನಾಯಿ ಸತ್ತು ಹೋಗಿದೆ.

Edited By : Vijay Kumar
Kshetra Samachara

Kshetra Samachara

17/02/2021 01:19 pm

Cinque Terre

14.21 K

Cinque Terre

0

ಸಂಬಂಧಿತ ಸುದ್ದಿ