ಬಂಟ್ವಾಳ: ಇಬ್ಬರು ಯುವಕರು ಅಪ್ತಾಪ್ತ ವಯಸ್ಕ ಬಾಲಕಿಯೊಬ್ಬಳ ಅತ್ಯಾಚಾರವೆಸಗಿ ಬಳಿಕ ಫೊಟೋವನ್ನು ಕ್ಲಿಕ್ಕಿಸಿ, ಬಹಿರಂಗಪಡಿಸುವುದಾಗಿ ಬೆದರಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಅಬೂಬಕ್ಕರ್ ಸಿದ್ದಿಕ್ ಮತ್ತು ಚಪ್ಪಿ ಎಂಬವರ ವಿರುದ್ಧ ಕೇಸು ದಾಖಲಾಗಿದ್ದು, ಅವರಿಬ್ಬರ ಹುಡುಕಾಟವನ್ನು ವಿಟ್ಲ ಪೊಲೀಸರು ನಡೆಸುತ್ತಿದ್ದಾರೆ.
2020ನೇ ಜನವರಿ ತಿಂಗಳಿನಲ್ಲಿ ಆರೋಪಿ ಅಬೂಬಕ್ಕರ್ ಸಿದ್ದಿಕ್ ಆತನ ಸ್ನೇಹಿತ ಚಪ್ಪಿ ಎಂಬವರು ಪೋನ್ ಮುಖಾಂತರ ಬಾಲಕಿಯಲ್ಲಿ ಸಲುಗೆಯಿಂದ ಮಾತನಾಡಿ ಜ.25ರ ರಾತ್ರಿ ಮನೆಯಿಂದ ಹೊರಬರಲು ಹೇಳಿ, ಮನೆಯ ಅಂಗಳದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆತನ ಸ್ನೇಹಿತ ಚಪ್ಪಿ ಕೂಡ ದೌರ್ಜನ್ಯ ನಡೆಸಿ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಮೊಬೈಲ್ನಲ್ಲಿರುವ ಪೋಟೋಗಳನ್ನು ಬೇರೆಯವರಿಗೆ ಕಳುಹಿಸುವುದಾಗಿ ಹೆದರಿಸಿದ್ದಾಗಿ ದೂರಲಾಗಿದೆ. ಹಿಂದೆ ನಡೆದ ರೀತಿ ಲೈಂಗಿಕ ಕ್ರಿಯೆ ನಡೆಸಲು ಬರುವಂತೆ ಆರೋಪಿಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
Kshetra Samachara
10/02/2021 10:43 am