ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: ನಕಲಿ ಚಿನ್ನ ಅಡವಿರಿಸಿ ಲಕ್ಷಾಂತರ ರೂ. ಪಂಗನಾಮ; ವಂಚಕ ಅಂದರ್

ಮಂಗಳೂರು: ಗ್ರಾಹಕರ ಸೋಗಿನಲ್ಲಿ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ನಕಲಿ ಚಿನ್ನ ಅಡವಿರಿಸಿ, ಲಕ್ಷಾಂತರ ರೂ. ದೋಚಿದ ಪ್ರಕರಣದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಬೇರಿಕೆ ಕಾಯಕ್ಕಾಡ್ ನಿವಾಸಿ ಗಿರೀಶ್ ಕುಮಾರ್ ಬಂಧಿತ ಆರೋಪಿ.ಕಳೆದೆರಡು ದಿನಗಳ ಹಿಂದೆ ಕೇರಳ ನೋಂದಣಿ ಸಂಖ್ಯೆ ಹೊಂದಿದ್ದ ಕಾರಲ್ಲಿ ಆಗಮಿಸಿದ್ದ ಈತ ಉಪ್ಪಿನಂಗಡಿಯಲ್ಲಿರೋ ಸಹಕಾರಿ ಹಣಕಾಸು ಸಂಸ್ಥೆಯಲ್ಲಿ ನಕಲಿ ಚಿನ್ನಾಭರಣ ಅಡಮಾನವಿರಿಸಿ ಸಾಲವನ್ನು ಕೇಳಿದ್ದ. ಈತನಲ್ಲಿದ್ದ ಸೊತ್ತು ನೈಜ ಚಿನ್ನಾಭರಣ ಎಂದು ತಪ್ಪಾಗಿ ತಿಳಿದಿದ್ದ ಆಭರಣ ಸಂಸ್ಥೆಯ ಸಿಬ್ಬಂದಿ ಈತನಿಗೆ ಹಣ ನೀಡಿದ್ದರು. ಆತ ನೀಡಿದ ಸೊತ್ತು ಅಸಲಿ ಚಿನ್ನಾಭರಣ ಅಲ್ಲ ಎಂದು ಅರಿವಾದ ಸಂದರ್ಭ ಆರೋಪಿ ಪರಾರಿಯಾಗಿದ್ದ ಎಂದು ದೂರಲಾಗಿತ್ತು. ಆತನಿಂದ ವಂಚನೆಯಾಗಿರುವ ಬಗ್ಗೆ ಎರಡು ಸಹಕಾರಿ ಸಂಸ್ಥೆಗಳು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

28/01/2021 12:08 pm

Cinque Terre

8.49 K

Cinque Terre

0

ಸಂಬಂಧಿತ ಸುದ್ದಿ