ಮಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಚಂದ್ರ ಶೇಖರ್ ಹಾಗೂ ಹರೀಶ್ ಪೂಜಾರಿ ಬಂಧಿತರು. ನಗರದ ಅತ್ತಾವರದ ಬಳಿಯಿರುವ ಆಮಂತ್ರಣ ವಸತಿಗೃಹದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ವಸತಿಗೃಹದ ಕೊಠಡಿ ಸಂಖ್ಯೆ 211 ಹಾಗೂ 212ರಲ್ಲಿ ಗಿರಾಕಿಗಳನ್ನು ಕರೆಯಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಆಮಂತ್ರಣ ವಸತಿಗೃಹದ ಮ್ಯಾನೇಜರ್ ಚಂದ್ರಶೇಖರ ಹಾಗೂ ರೂಂ ಬಾಯ್ ಹರೀಶ್ ಪೂಜಾರಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು.
ಈ ಸಂದರ್ಭ ಇಬ್ಬರು ಮಹಿಳೆಯರನ್ನು ಹಾಗೂ ಇಬ್ಬರು ಗಿರಾಕಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
24/01/2021 02:21 pm