ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲಕಾಡಿ ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿಯ ಅಂಗಡಿ ಲೂಟಿಗೆ ಯತ್ನ ನಡೆದಿದೆ.
ಸುಜಾತ ಆಚಾರ್ಯ ಎಂಬವರ ಮಾಲೀಕತ್ವದ ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಹಣಕ್ಕಾಗಿ ಜಾಲಾಡಿದ್ದಾರೆ. ಬಳಿಕ ಹಣ ಸಿಗದೇ ಇದ್ದಾಗ ಅಂಗಡಿಯ ಡಬ್ಬಿಯಲ್ಲಿದ್ದ ಚಾಕೊಲೇಟ್ ಮತ್ತು ಕಟ್ಲೇರಿ ತಿಂದು ಪರಾರಿಯಾಗಿದ್ದಾರೆ.
ಬೆಳಿಗ್ಗೆ ಸುಜಾತ ಆಚಾರ್ಯ ಬಂದು ಅಂಗಡಿಯ ಬಾಗಿಲು ತೆಗೆದು ನೋಡಿದಾಗ ಬೀಗ ಚರಂಡಿಯಲ್ಲಿ ಬಿದ್ದಿದ್ದು ಕಂಡುಬಂದಿದ್ದು, ಕೂಡಲೇ ಗಾಬರಿಗೊಂಡು ಸ್ಥಳೀಯ ಪಂಚಾಯತ್ ಸದಸ್ಯ ಮನೋಹರ ಕೋಟ್ಯಾನ್ ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲಕಾಡಿಯಂತಹ ತೀರಾ ಗ್ರಾಮೀಣ ಪ್ರದೇಶದಲ್ಲಿಯೂ ಕಳ್ಳರ ಹಾವಳಿ ಬಗ್ಗೆ ಸ್ಥಳೀಯರು ಆತಂಕಗೊಂಡಿದ್ದಾರೆ.
Kshetra Samachara
14/01/2021 01:17 pm