ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ : ದೈವಸ್ಥಾನ, ಭಜನಾ ಮಂದಿರಗಳಲ್ಲಿ ಕಳವು: 13 ಲಕ್ಷ ಮೌಲ್ಯದ ಸೊತ್ತು ಸಹಿತ ಆರೋಪಿ ಸೆರೆ

ಮಂಗಳೂರು: ಹಲವಾರು ದೈವಸ್ಥಾನಗಳು, ಭಜನಾ ಮಂದಿರಗಳ ಬಾಗಿಲು ಮುರಿದು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಸುರತ್ಕಲ್ ಠಾಣೆ ಪೊಲೀಸರು 13 ಲಕ್ಷ ರೂ. ಮೌಲ್ಯದ ಬೆಳ್ಳಿ-ಬಂಗಾರದ ಸೊತ್ತು ವಶಪಡಿಸಿಕೊಂಡಿದ್ದಾರೆ.

ಮೂಲತಃ ಧಾರವಾಡ ತಾಲೂಕಿನ ಪ್ರಸ್ತುತ ಉಡುಪಿ ಜಿಲ್ಲೆಯ ಇಂದ್ರಾಳಿ ಸಮೀಪದ ಮಂಚಿ ಗ್ರಾಮ ನಿವಾಸಿ ರಾಜೇಶ್ ನಾಯ್ಕ್ ಅಲಿಯಾಸ್ ರಾಜು ಪಾಮಡಿ ಬಂಧಿತ.

ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಳಾಯಿ ನಂದನಜಲು ರವಿ ಶೆಟ್ಟಿಯವರ ಮನೆಯ ದೈವಸ್ಥಾನ, ಇಡ್ಯಾ ಗ್ರಾಮದ ಗುಡ್ಡೆಕೊಪ್ಪಳ ಜಾರು ಮನೆ ದೈವಸ್ಥಾನ ಹಾಗೂ ಶ್ರೀ ರಾಮಾಂಜನೇಯ ಭಜನಾ ಮಂದಿರ, ಚಿತ್ರಾಪುರ ಗ್ರಾಮದ ಸತೀಶ್ ಸುವರ್ಣರ ಮನೆಯ ದೈವಸ್ಥಾನಗಳಲ್ಲಿ ಈ ಖದೀಮ ಕಳವು ಕೃತ್ಯ ನಡೆಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ ಪೊಲೀಸರು 47 ಗ್ರಾಂ ತೂಕದ ಚಿನ್ನದ ಹಾಗೂ 16 ಕೆ.ಜಿ. ತೂಕದ ಬೆಳ್ಳಿಯ ಸೊತ್ತು ವಶಪಡಿಸಿದ್ದಾರೆ. ಇದರ ಒಟ್ಟು ಮೌಲ್ಯ 13.52 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

11/01/2021 09:30 am

Cinque Terre

8.45 K

Cinque Terre

0

ಸಂಬಂಧಿತ ಸುದ್ದಿ