ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಮಹಿಳೆ ಆತ್ಮಹತ್ಯೆ; ಅಂತ್ಯಕ್ರಿಯೆ ನೆರವೇರಿಸಿದ ಫ್ರೆಂಡ್ಸ್ ವಿಟ್ಲ ತಂಡ

ಬಂಟ್ವಾಳ: ಬಡತನ, ಕುಡಿತದ ಚಟದಿಂದ ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಬಾಲಕೃಷ್ಣ ನಾಯ್ಕ ಅವರ ಪತ್ನಿ ವನಿತಾ (40) ಗುರುವಾರ ಮುಂಜಾನೆ ತನ್ನ ಮನೆಯೊಳಗೆ ಮೈಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬುಧವಾರ ರಾತ್ರಿ ಕುಡಿತದ ಮತ್ತಿನಲ್ಲಿ ಪತಿ- ಪತ್ನಿ ಜಗಳವಾಡಿದ್ದರು. ಗುರುವಾರ ಬೆಳಗ್ಗೆ ಅವರು ಮೃತಪಟ್ಟಿದ್ದಾರೆ. ವನಿತಾಗೆ ನಾಲ್ವರು ಮಕ್ಕಳಿದ್ದು, ಅವರ ಪೈಕಿ ಇಬ್ಬರು ಹೆಣ್ಣುಮಕ್ಕಳನ್ನು ಮೂರು ವರ್ಷಗಳ ಹಿಂದೆ ಕನ್ಯಾನದ ಭಾರತ ಸೇವಾಶ್ರಮಕ್ಕೆ ಸೇರಿಸಲಾಗಿತ್ತು. ಐದು ತಿಂಗಳ ಹಿಂದೆ ಈ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಜೊತೆಗೆ ಮೂರು ವರ್ಷದ ವಿಶೇಷಚೇತನ ಮಗುವೂ ಇದೆ. ಇಷ್ಟೆಲ್ಲದರ ನಡುವೆ ಈ ದಂಪತಿಗೆ ಕುಡಿತದ ಚಟವಿದ್ದು, ಇದು ತಾರಕಕ್ಕೇರಿ ಗಂಡ- ಹೆಂಡತಿ ಜಗಳ ಹೆಂಡತಿಯ ಆತ್ಮಹತ್ಯೆಯಲ್ಲಿ ಅಂತ್ಯಗೊಂಡಿತು.

ದಿಕ್ಕೇ ತೋಚದ ಬಾಲಕೃಷ್ಣ ನಾಯ್ಕ್ ಅವರ ನೆರವಿಗೆ ಬಂದ ವಿಟ್ಲ ಫ್ರೆಂಡ್ಸ್ ತಂಡ ಮುರಳೀಧರ ಅವರ ನೇತೃತ್ವದಲ್ಲಿ ವನಿತಾ ಅವರ ಅಂತ್ಯಸಂಸ್ಕಾರದ ಜವಾಬ್ದಾರಿ ಹೊತ್ತುಕೊಂಡಿತು. ಪೋಸ್ಟ್ ಮಾರ್ಟಂ ಬಳಿಕ ಮೃತದೇಹದ ಅಂತ್ಯಸಂಸ್ಕಾರವನ್ನು ಫ್ರೆಂಡ್ಸ್ ತಂಡ, ಪಳಿಕೆ ಹಿಂದು ರುದ್ರಭೂಮಿಯಲ್ಲಿ ಮನೆಯವರ ಸಮ್ಮುಖದಲ್ಲಿ ನೆರವೇರಿಸಿತು. ವಿಟ್ಲ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

07/01/2021 06:29 pm

Cinque Terre

9.36 K

Cinque Terre

0

ಸಂಬಂಧಿತ ಸುದ್ದಿ