ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಕಿಡ್ನಾಪ್ ಕೇಸ್‌ಗೆ ಟ್ವಿಸ್ಟ್‌- ಶಾಲೆಗೆ ಹೋಗಲು ಮನಸ್ಸಿಲ್ಲದೆ ವಿದ್ಯಾರ್ಥಿನಿಯ ಹೈಡ್ರಾಮಾ

ಸುಳ್ಯ: ಕುಕ್ಕುಜಡ್ಕ ಶಾಲಾ ವಿದ್ಯಾರ್ಥಿನಿಯ ಕಿಡ್ನಾಪ್ ಪ್ರಕರಣಕ್ಕೆ ಟ್ವಿಟ್‌ ಸಿಕ್ಕಿದ್ದು, ಪೊಲೀಸರು ಹಾಗೂ ಸ್ಥಳೀಯರಿಗೆ ಅಚ್ಚರಿ ಮೂಡಿಸಿದೆ.

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಸ್ಪ್ರೇ ಸಿಂಪಡಿಸಿ ನನ್ನನ್ನು ಅಪಹರಿಸಲು ಯತ್ನಿಸಿದ್ದರು. ಆದರೆ ಈ ವೇಳೆ ವಾಹನದ ಶಬ್ದ ಕೇಳಿದ ತಕ್ಷಣವೇ ಅಲ್ಲಿಂದ ಪರಾರಿಯಾದರು ಎಂದು ರಾಗಿಯಡ್ಕ ನಿವಾಸಿ ಕುಕ್ಕುಜಡ್ಕ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಹೇಳಿದ್ದರು. ಈ ಘಟನೆ ಸುಳ್ಯ ತಾಲೂಕಿನ ಜನರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು.

ಈ ಸಂಬಂಧ ತನಿಖೆ ಆರಂಭಿಸಿದ ಬೆಳ್ಳಾರೆ ಠಾಣೆ ಪೊಲೀಸರಿಗೆ ವಿದ್ಯಾರ್ಥಿನಿಯ ಹೇಳಿಕೆ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಆಕೆಯನ್ನು ತೀವ್ರ ವಿಚಾರಣೆ ನಡೆಸಿದಾಗ, ''ಶಾಲೆಗೆ ಹೋಗಲು ಮನಸಿಲ್ಲದೆ ಹೀಗೆ ಸುಳ್ಳು ಹೇಳಿದ್ದೇನೆ'' ಎಂದು ಹೇಳಿಕೆ ನೀಡಿದ್ದಾಳೆ.

Edited By : Vijay Kumar
Kshetra Samachara

Kshetra Samachara

06/01/2021 01:25 pm

Cinque Terre

9.21 K

Cinque Terre

1

ಸಂಬಂಧಿತ ಸುದ್ದಿ