ವಿಟ್ಲ: ಪ್ರಿಯಕರನಿಗಾಗಿ ದರೋಡೆ ನಾಟಕವಾಗಿದ್ದ ಮಹಿಳೆ ತನಿಖೆಯಲ್ಲಿ ವಿಟ್ಲ ಠಾಣಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಪತಿ, ಆಟೋ ಚಾಲಕ ರಫೀಕ್ ಹಾಗೂ ಆತನ ಮಗ ಮಧ್ಯಾಹ್ನ ನಮಾಜ್‌ಗೆ ತೆರಳಿದ್ದಾಗ ಮನೆಯೊಳಗೆ ನುಗ್ಗಿದ ವ್ಯಕ್ತಿ ನನ್ನನ್ನು ಕಟ್ಟಿ ಹಾಕಿ ಕಿವಿಯೊಲೆ, ಉಂಗುರ ಹಾಗೂ ಚಿನ್ನದ ಸರ ಕಿತ್ತುಕೊಂಡು ಕಳ್ಳ ಪರಾರಿಯಾಗಿದ್ದಾನೆ ಎಂದು ಆರೋಪಿ ಜೈನಾಬಿ ಕಥೆ ಕಟ್ಟಿದ್ದಳು. ಈ ಸಂಬಂಧ ಆಕೆಯ ಕುಟುಂಬಸ್ಥರು ವಿಟ್ಲ ಠಾಣೆಗೆ ದೂರು ನೀಡಿದರು. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಜೈನಾಬಿಯೇ ಚಿನ್ನವನ್ನು ಬೇರೆಡೆಗೆ ಸಾಗಿಸಿದ್ದು ಬೆಳಕಿಗೆ ಬಂದಿದೆ.
ಮನೆಯ ಪಕ್ಕದಲ್ಲಿ ವಾಸವಿರುವ ಪ್ರಿಯಕರನ ಕಾಟಕ್ಕೆ ಬಾಡಿಗೆ ಮನೆ ಬದಲಿಸುವ ನಿರ್ಧಾರಕ್ಕೆ ಜೈನಾಬಿ ಬಂದಿದ್ದಳು. ಹೀಗಾಗಿ ದರೋಡೆ ನಾಟಕಕ್ಕೆ ಮುಂದಾಗಿದ್ದಾಳೆ. ಪೊಲೀಸರು ತನಿಖೆ ಜೈನಾಬಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ. ಪೊಲೀಸರು ಆರೋಪಿಗಳಿಂದ ಸದ್ಯ ಭಾಗಶಃ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
Kshetra Samachara
06/01/2021 12:57 pm