ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಯುವತಿಗೆ ಬ್ಲ್ಯಾಕ್ ಮೇಲ್ ಪ್ರಕರಣ: ಆರೋಪಿ ಪೊಲೀಸ್ ವಶಕ್ಕೆ

ಬಂಟ್ವಾಳ: ಯುವತಿಯೊಬ್ಬಳ ನಗ್ನ ಚಿತ್ರಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಆರೋಪ ಹೊತ್ತಿರುವ ಪುಣಚ ಲಕ್ಕೋನಿ ನಿವಾಸಿ ಬಶೀರ್ ಎಂಬಾತನನ್ನು ವಿಟ್ಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

‌ಕಡಂಬು ಬೆದ್ರಕಾಡು ನಿವಾಸಿ 19 ವರ್ಷದ ಅವಿವಾಹಿತ ಯುವತಿಯನ್ನು ಕಳೆದ ಸೆಪ್ಟೆಂಬರ್ ನಿಂದ ಬಲಾತ್ಕಾರವಾಗಿ ನಿರಂತರ ದೈಹಿಕ ಸಂಪರ್ಕ ಮಾಡಿದ್ದು, ನಗ್ನ ಚಿತ್ರಗಳನ್ನು ಮೊಬೈಲ್ ನಲ್ಲಿ ತೆಗೆದುಕೊಂಡಿದ್ದ ಎಂದು ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ‌‌ ‌ ಈ ಚಿತ್ರಗಳನ್ನು ಇಟ್ಟುಕೊಂಡು ತನ್ನ ಬೇಡಿಕೆಗಳನ್ನು ಪೂರೈಸದೇ ಹೋದಲ್ಲಿ ಮೊಬೈಲ್ ನಲ್ಲಿರುವ ಚಿತ್ರಗಳನ್ನು ವೈರಲ್ ಮಾಡುವ ಜತೆಗೆ ಜೀವ ಬೆದರಿಕೆಯನ್ನೂ ಹಾಕಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Edited By : Nagaraj Tulugeri
Kshetra Samachara

Kshetra Samachara

04/01/2021 10:09 pm

Cinque Terre

13.88 K

Cinque Terre

0

ಸಂಬಂಧಿತ ಸುದ್ದಿ