ಮುಲ್ಕಿ: ಸುರತ್ಕಲ್‌ನ ಖಾಸಗಿ ಹೊಟೇಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೇಪಾಳಿ ಮೂಲದ ರೋಹಿತ್ ಅಧಿಕಾರಿ (47) ಡಿ. 29ರಂದು ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ.
ಹೊಟ್ಟೆ ನೋವು ಎಂದು ಜೀರಿಗೆ ನೀರು ಕುಡಿದು ಮಲಗುವುದಾಗಿ ಹೇಳಿ ಹೋಗಿದ್ದ ಅವರು, ರಾತ್ರಿ ಪಾಳಿ ಕೆಲಸಕ್ಕೆ ಹಾಜರಾಗಬೇಕಿತ್ತು. ಆದರೆ ಅವರು ಬಾರದೆ ಇರುವುದನ್ನು ಕಂಡ ಹೊಟೇಲ್ ಮ್ಯಾನೇಜರ್ ಆತನ ಕೊಠಡಿಗೆ ಹೋಗಿ ನೋಡಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
Kshetra Samachara
30/12/2020 10:40 pm