ಬಂಟ್ವಾಳ: ಪಾಣೆಮಂಗಳೂರು ಸಮೀಪದ ನಂದಾವರದ ತೋಡಿನಲ್ಲಿ ಭಾನುವಾರ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮೃತ ಮಹಿಳೆಯನ್ನು ಬೊಂಡಾಲ ಅಂತರಗುತ್ತು ನಿವಾಸಿ ಯಮುನಾ ಶೆಟ್ಟಿ(60) ಎಂದು ಗುರುತಿಸಲಾಗಿದೆ. ಬಂಟ್ವಾಳ ನಗರ ಪೊಲೀಸರು ಆಗಮಿಸಿ ಮಹಜರು ನಡೆಸಿದರು. ಈ ವೇಳೆ ಮಹಿಳೆ ಬಂಟ್ವಾಳ ತಾಲೂಕಿನ ಬೊಂಡಾಲದವರು ಎಂದು ಗುರುತಿಸಲಾಯಿತು. ಸೆ. 24ರಂದು ಅವರು ಸುರತ್ಕಲ್ ನಲ್ಲಿರುವ ಮಗನ ಬಳಿ ನಾಳೆ ನೇಜಿ ನೆಡಲು ಹೋಗುವುದಾಗಿ ತಿಳಿಸಿದ್ದು, ಆದರೆ ಸೆ. 25ರಿಂದ ನಾಪತ್ತೆಯಾಗಿದ್ದರು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
27/09/2020 10:55 pm