ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಾಡಹಗಲೇ ಮನೆಯಲ್ಲಿ ಕಳವು; ಮೂವರು ಮಹಿಳೆಯರ ಬಂಧನ

ಮಂಗಳೂರು: ನಗರದ ಶಿವಭಾಗ್‌ನ ಮನೆಯೊಂದರಿಂದ ಹಾಡಹಗಲೇ ಕಳ್ಳತನ ಮಾಡಿದ ಆರೋಪದಲ್ಲಿ ಮೂವರು ಮಹಿಳೆಯರನ್ನು ಕದ್ರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತರನ್ನು ಹಾಸನ ಹೊಳೆನರಸೀಪುರ ನಿವಾಸಿಗಳಾದ ಶಿವಗಾಮಿ (37), ಲಕ್ಷ್ಮೀ (30),ಮಂಜು (28) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳಿಂದ ಕಳವುಗೈದ ಸೊತ್ತು ಮತ್ತು ಕೃತ್ಯಕ್ಕೆ ಬಳಸಿದ ಸಾಧನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಶಿವಭಾಗ್ ತಾರೆತೋಟದ ಬಳಿ ಬೆಳಗ್ಗಿನ ವೇಳೆ ಮನೆಗೆ ಕನ್ನ ಹಾಕಿದ್ದ ಬಂಧಿತರು, ಮನೆಯಲ್ಲಿದ್ದ 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 18 ಸಾವಿರ ರೂ. ನಗದು ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಕದ್ರಿ ಪೊಲೀಸ್ ಠಾಣೆಯ ಪೊಲೀಸರು ಶನಿವಾರ ಮೂವರು ಆರೋಪಿಗಳನ್ನು ಬಂಧಿಸಿ, ಕಳವು ಗೈದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Edited By : Vijay Kumar
Kshetra Samachara

Kshetra Samachara

03/10/2020 10:50 pm

Cinque Terre

9.73 K

Cinque Terre

0

ಸಂಬಂಧಿತ ಸುದ್ದಿ