ಬಸ್ ನಲ್ಲಿ ಸಂಚರಿಸುತ್ತಿದ್ದ ಯುವತಿಗೆ ಕಿರುಕುಳ ನೀಡಿ ದರ್ಪ ಮೆರೆದ ಕಾಮುಕನನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಿ.ಸಿ.ರೋಡ್ ನಿವಾಸಿ ಮಹಮ್ಮದ್ ಮುಸ್ತಫಾ ಬಂಧಿತ ಕಾಮುಕ. ಬೆಂಗಳೂರಿನಿಂದ ಇಂಟರ್‌ವ್ಯೂ ಗೆಂದು ಮಂಗಳೂರಿಗೆ ಯುವತಿಯೋರ್ವಳು ಜೂನ್ 7ರಂದು ಬೆಳಗ್ಗಿನ ಜಾವ 5ಗಂಟೆಗೆ ಸ್ಲೀಪರ್ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದಳು. ಆಗ ಆಕೆಯ ಬಲಭಾಗದಲ್ಲಿ ಸ್ಲೀಪರ್ ಸೀಟ್ ನಲ್ಲಿದ್ದ ಕಾಮುಕ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಪ್ರತಿಭಟಿಸಿದಾಗ ದರ್ಪದಿಂದ ಆತ ಉತ್ತರಿಸಿದ್ದಾನೆ.
ಯುವತಿ ಬಸ್ ಸಿಬ್ಬಂದಿಗೆ ಹೇಳಬೇಕೆನ್ನುವಷ್ಟರಲ್ಲಿ ಆತ ನಗರದ ಪಂಪ್ ವೆಲ್ ಬಳಿ ಇಳಿದು ಓಡಿಹೋಗಿದ್ದಾನೆ. ಆ ಬಳಿಕ ಆಕೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Kshetra Samachara
08/06/2022 04:09 pm