ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಕ್‌ಡೌನ್ ಬಳಿಕ ಅಪರಾಧ ಪ್ರಕರಣ ಹೆಚ್ಚಳ

ಮುಂಬೈಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಯುವಕ. ತಿಂಗಳಿಗೆ 10 ಸಾವಿರ ರೂ. ಬಾಡಿಗೆ. 1.25 ಲಕ್ಷ ರೂ. ಡಿಪಾಸಿಟ್ ಕಟ್ಟಿದ್ದಾರೆ.

ಲಾಕ್ಡೌನ್ ಬಳಿಕ ಆರು ತಿಂಗಳಿನಿಂದ ವ್ಯಾಪಾರ ಇಲ್ಲ. ಆದರೆ ಕಟ್ಟಡ ಬಾಡಿಗೆ, ಮನೆ ಬಾಡಿಗೆ ಕಟ್ಟಬೇಕು. ಡಿಪಾಸಿಟ್ ಹಿಂತಿರುಗಿಸಲು ಮಾಲೀಕರು ಕೇಳುತ್ತಿಲ್ಲ.

ಅದನ್ನು ಬಿಟ್ಟು ಊರಿಗೆ ಬಂದ ಆತ ಮುಂದೇನು ಎನ್ನುವ ಕೊರಗಿನಲ್ಲಿ ಈಗ ಮಾನಸಿಕ ಖಿನ್ನತೆಗೆ ಜಾರಿದ್ದಾನೆ.

ಊರಿನ ಮನೆಯಲ್ಲಿ ಪತ್ನಿಯೊಬ್ಬಳನ್ನೇ ಬಿಟ್ಟು ಮುಂಬೈಯಲ್ಲಿ ಉದ್ಯೋಗ ಮಾಡುತ್ತಿದ್ದ ಪತಿ. ಮಗನಿಗೂ ಬೆಂಗಳೂರಿನಲ್ಲಿ ಕೆಲಸ.

ಯಾರೊಂದಿಗೂ ಬೆರೆಯದೆ ಒಂಟಿ ಜೀವನದಿಂದ ಮಾನಸಿಕ ಖಿನ್ನತೆಗೊಳಗಾಗಿ ಆ ಮಹಿಳೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡರು.

ಈ ಎರಡು ಘಟನೆಗಳು ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಗಳು. ಇಂತಹ ನೂರಾರು ಘಟನೆಗಳು ನಡೆಯುತ್ತಲೇ ಇವೆ.

ಒಂದೊಂದು ಆತ್ಮಹತ್ಯೆಯ ಹಿಂದೆಯೂ ನಿಗೂಢ ಕಾರಣಗಳಿವೆ. ಕೆಲವರು ಮಾನಸಿಕ ತಜ್ಞರ ಬಳಿಗೆ ತೆರಳಿ ಚಿಕಿತ್ಸೆ ಪಡೆದರೆ, ಇನ್ನು ಕೆಲವರು ಆತ್ಮಹತ್ಯೆಯಲ್ಲಿ ಅಂತ್ಯ ಕಾಣುತ್ತಾರೆ.

ಹಲವು ಕಾರಣ: ಕರೊನಾ ಲಾಕ್ಡೌನ್ ಬಳಿಕ ಆರು ತಿಂಗಳ ಅವಧಿಯಲ್ಲಿ ಹಲವು ಕಾರಣಗಳಿಂದ ಆತ್ಮಹತ್ಯೆ ಹಾಗೂ ಕಳವು ಪ್ರಕರಣಗಳ ಸಂಖ್ಯೆ ಹೆಚ್ಚಿದೆ.

ಕೆಲಸ ಕಳೆದುಕೊಂಡಿರುವುದರಿಂದ ಆರ್ಥಿಕ ಸಂಕಷ್ಟ, ವ್ಯವಹಾರವಿಲ್ಲದೆ ಸಾಲದ ಹೊರೆ, ಕೌಟುಂಬಿಕ ಸಮಸ್ಯೆ ಮಾನಸಿಕ ಖಿನ್ನತೆ ಮೊದಲಾದ ಕಾರಣಗಳೂ ಇವೆ.

ಸಂಪಾದನೆ ಇಲ್ಲದೆ ಕಳವು, ದರೋಡೆ, ಡ್ರಗ್ಸ್ ಮಾರಾಟ ಮೊದಲಾದ ಅಡ್ಡದಾರಿಯಲ್ಲಿ ಹಣ ಸಂಪಾದನೆಗೆ ತೊಡಗಿದವರ ಸಂಖ್ಯೆಯೂ ಹೆಚ್ಚುತ್ತಿದೆ.

ಸುರತ್ಕಲ್ ಇಡ್ಯಾದಲ್ಲಿ 51 ಲಕ್ಷ ರೂ. ಕಳವು ಮಾಡಿದ ಪ್ರಕರಣದಲ್ಲಿ ಮಾಜಿ ಸೈನಿಕನ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ನಿರಂತರ ಮಳೆಯಾಗುವುದನ್ನು ಸದುಪಯೋಗಪಡಿಸಿಕೊಂಡಿರುವ ಕಳ್ಳರು ಮೂರು ದಿನಗಳ ಹಿಂದೆ ಮೂರು ಪೆಟ್ರೋಲ್ ಪಂಪ್ಗಳಲ್ಲಿ ಕಳ್ಳತನ ಮಾಡಲು ವಿಫಲ ಯತ್ನ ನಡೆಸಿದ್ದರು.

ಬಸ್ಗಳಲ್ಲಿ ಪಿಕ್ ಪಾಕೆಟ್, ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಳೆದೊಯ್ಯುತ್ತಿರುವ ಪ್ರಕರಣಗಳೂ ದಾಖಲಾಗುತ್ತಿವೆ. ಇನ್ನು ಕೆಲವರು ಡ್ರಗ್ಸ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಉಭಯ ಜಿಲ್ಲೆಗಳಲ್ಲಿ ಒಂದು ತಿಂಗಳ ಅವಧಿಯಲ್ಲಿ 30ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

ಶೇ.35 ಹೆಚ್ಚಳ: ಏಪ್ರಿಲ್ ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು 81 ಆತ್ಮಹತ್ಯೆ, 36 ಕಳವು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 73 ಆತ್ಮಹತ್ಯೆ, 38 ಕಳವು, ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 51 ಆತ್ಮಹತ್ಯೆ, 39 ಕಳವು ಪ್ರಕರಣ ದಾಖಲಾಗಿವೆ.

ಕಳೆದ ವರ್ಷ ಇದೇ ಅವಧಿಯಲ್ಲಿ ದಾಖಲಾದ ಅಂಕಿ ಅಂಶಗಳಿಗೆ ಹೋಲಿಸಿದಾಗ ಶೇ.35ರಷ್ಟು ಹೆಚ್ಚಳವಾಗಿದೆ. ಆನ್ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಲಾಕ್ಡೌನ್ ಬಳಿಕದ ಆರು ತಿಂಗಳ ಅವಧಿಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಮೂರು ಪಟ್ಟು ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

ಉದ್ಯೋಗ ಸಮಸ್ಯೆ, ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆಗಳಿಂದ ಬಳಲುವವರ ಸಂಖ್ಯೆಯೇ ಅಧಿಕ. ಅವರಿಗೆ ಧೈರ್ಯ ಹೇಳಿ ಜೀವನೋತ್ಸಾಹ ತುಂಬುವ ಕೆಲಸ ಮಾಡುತ್ತಿದ್ದೇವೆ.

ಡಾ.ಪಿ.ವಿ.ಭಂಡಾರಿ, ಮನೋರೋಗ ಚಿಕಿತ್ಸಕ ಉಡುಪಿ

ಪ್ರಸ್ತುತ ಆತ್ಮಹತ್ಯೆ ಹಾಗೂ ಕಳವು ಪ್ರಕರಣ ಹೆಚ್ಚಳವಾಗುತ್ತಿರುವುದಕ್ಕೆ ನಾನಾ ಕಾರಣಗಳಿವೆ. ಮನೆ ಕಳವು ಪ್ರಕರಣಗಳು ಹೆಚ್ಚಾಗದಂತೆ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.

ಉದ್ಯೋಗ ಕಳೆದುಕೊಂಡವರು ಎದೆಗುಂದದೆ ಪರ್ಯಾಯ ಉದ್ಯೋಗ ಮಾಡುವ ಮೂಲಕ ಸ್ವಾವಲಂಬಿಗಳಾಗಬೇಕು.

ವಿಕಾಸ್ ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ

ಕೃಪೆ:ವಿ.ವಾ

Edited By : Nirmala Aralikatti
Kshetra Samachara

Kshetra Samachara

25/09/2020 04:18 pm

Cinque Terre

13.41 K

Cinque Terre

0

ಸಂಬಂಧಿತ ಸುದ್ದಿ