ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆಗ್ಗಾನ್ ಆಸ್ಪತ್ರೆಯ ಸಾಮೂಹಿಕ ಅತ್ಯಾಚಾರ ಕೇಸ್ : ಆರೋಪಿಗಳು ಅಂದರ್

ಶಿವಮೊಗ್ಗ: ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದ್ದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ನಾಲ್ವರು ಆರೋಪಿತರು ಒಂದೇ ಬಡಾವಣೆಯ ನಿವಾಸಿಗಳು. ಈ ಪೈಕಿ ಒಬ್ಬ ವಿದ್ಯಾರ್ಥಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಮನೋಜ್, ಪ್ರಜ್ಬಲ್, ವಿನಯ್, ಸಂದೀಪ್ ಎಂಬವರನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತರೆಲ್ಲರೂ ಒಂದೇ ಬಡಾವಣೆಯವರಾಗಿದ್ದು, 20 ರಿಂದ 23 ವಷರ್ದವರಾಗಿದ್ದಾರೆ.

ಬಂಧಿತರ ಪೈಕಿ ಪ್ರಮುಖ ಆರೋಪಿ ಮಾಸ್ಟರ್ ಮೈಡ್ ಮನೋಜ್ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ಆಗಿ ಕೆಲಸ ನಿರ್ವಹಿಸುತ್ತಿದ್ದರೆ, ಓರ್ವ ವೈನ್ ಶಾಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.

ಇನ್ನೊಬ್ಬ ಕೂಲಿ ಕೆಲಸ ಮಾಡುತ್ತಿದ್ದು, ಮತ್ತೋರ್ವ ವಿದ್ಯಾರ್ಥಿಯಾಗಿದ್ದಾನೆ.

Edited By : Nirmala Aralikatti
Kshetra Samachara

Kshetra Samachara

07/12/2020 10:02 pm

Cinque Terre

18.4 K

Cinque Terre

0

ಸಂಬಂಧಿತ ಸುದ್ದಿ