ಬಂಟ್ವಾಳ: ಮೆಲ್ಕಾರ್‌ನಲ್ಲಿ ಶುಕ್ರವಾರ ನಡೆದ ರೌಡಿಶೀಟರ್ ಚೆನ್ನ ಫಾರೂಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಬೆಳಗ್ಗೆ ನಡೆದ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಯಾಚರಣೆ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಹಫೀಜ್ ಹಾಗೂ ಇನ್ನೊಬ್ಬನನ್ನು ಉಪ್ಪಿನಂಗಡಿ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಈರಯ್ಯ ನೇತೃತ್ವದ ತಂಡ ಬಂಧಿಸಿ, ರಹಸ್ಯ ಪ್ರದೇಶದಲ್ಲಿ ಇರಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೆಲ್ಕಾರ್‌ನಲ್ಲಿ ಶುಕ್ರವಾರ ರಾತ್ರಿ ವೈಯಕ್ತಿಕ ದ್ವೇಷದಿಂದ ರೌಡಿಶೀಟರ್ ಫಾರೂಕ್‌ನ ಕೊಲೆ ನಡೆದಿತ್ತು.
ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇಂದು ಬೆಳಗ್ಗೆ ಪುತ್ತೂರಿನ ಗುಂಡ್ಯ ಬಳಿ ಆರೋಪಿ ಖಲೀಲ್‌ನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.
ಈ ವೇಳೆ ಆತನೊಂದಿಗೆ ಇದ್ದ ಹಫೀಝ್, ಮತ್ತೊಬ್ಬ ಪರಾರಿಯಾಗಿದ್ದರು.
Kshetra Samachara
24/10/2020 09:07 pm