ಕಾಸರಗೋಡು: ಇಲ್ಲಿನ ಜಿಲ್ಲಾಧಿಕಾರಿಯವರ ಹೆಸರಿನಲ್ಲಿ ನಕಲಿ ಇ ಮೇಲ್ ರವಾನೆಯಾಗುತ್ತಿದ್ದು, ಸಾರ್ವಜನಿಕರು ಜಾಗೃತರಾಗಿರುವಂತೆ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ವಿನಂತಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಿಲ್ಲಾಧಿಕಾರಿಯವರು, ಯಾರೂ ಮೋಸ ಹೋಗಬಾರದು. ಸಂದೇಶ ಬಂದರೆ ತಮ್ಮ ಗಮನಕ್ಕೆ ತರಬೇಕೆಂದು ಹೇಳಿದ್ದಾರೆ.
ತಲಾ 5 ಸಾವಿರ ರೂ. ಮೌಲ್ಯದ 4 ಅಮೆಜಾನ್ ಈ-ಕಾರ್ಡ್ ಖರೀದಿಸಿ jamsteh08@gmail.com ಎಂಬ ಇ-ಮೇಲ್ ಗೆ ಜಿಲ್ಲಾಧಿಕಾರಿ ಅವರ ಹೆಸರಲ್ಲಿ ರವಾನಿಸುವಂತೆ ನಕಲಿ ಸಂದೇಶವೊಂದು ಜಿಲ್ಲಾ ಇಲಾಖೆ ಮುಖ್ಯಸ್ಥರಿಗೆ ಲಭಿಸಿದೆ.
ಜಿಲ್ಲಾಧಿಕಾರಿ ಅವರು ತಮ್ಮ ಸ್ವಂತ ಐಪ್ಯಾಡ್ ನಿಂದ ಈ ಸಂದೇಶ ರವಾನಿಸುತ್ತಿದ್ದಾರೆ ಎಂಬ ರೀತಿಯ ಸಂದೇಶದಲ್ಲಿ ತಿಳಿಸಲಾಗುತ್ತಿದೆ.
executivedirector29@gmail.com ಎಂಬ ಇ-ಮೇಲ್ ನಿಂದ ಈ ಹುಸಿ ಸಂದೇಶ ರವಾನೆಯಾಗಿದೆ. ಇದು ನಕಲಿ ಎಂಬುದು ತನಿಖೆಯಿಂದ ಖಚಿತಗೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Kshetra Samachara
22/10/2020 03:03 pm