ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಪೋಸ್ಟ್: ಕೆರಳಿದ ನೆಟ್ಟಿಗರಿಂದ ಕಿರುತೆರೆ ನಟನಿಗೆ ಧಮ್ಕಿ

ಮಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಕಿರುತೆರೆ ನಟ ಶೋಭರಾಜ್ ಪಾವೂರು ಅವರಿಗೆ ನೆಟ್ಟಿಗರಿಂದ ಧಮ್ಕಿ ಮಾತುಗಳು ಕೇಳಿ ಬಂದಿವೆ.

ಶೋಭರಾಜ್ ಪಾವೂರು ಅವರು ನಿನ್ನೆ 'ನಮೋ' ನಮಗೆ ಮೋಸ... ಪೆಟ್ರೋಲ್ ಧಗಧಗ... ಡೀಸೆಲ್‌ ಭಗಭಗ...' ಎಂದು ಪೋಸ್ಟ್ ಮಾಡಿದ್ದರು‌. ಇದು ನೆಟ್ಟಿಗರನ್ನು ಕೆರಳಿಸಿದ್ದು, ಸಾಕಷ್ಟು ಮಂದಿಯಿಂದ ಅವಹೇಳನಕಾರಿ, ನಿಂದನೆ ಮಾಡಿರುವಂತಹ ಧಮ್ಕಿ ಮಾತುಗಳು ಕೇಳಿ ಬಂದಿವೆ‌.

ತಮ್ಮ ಪೋಸ್ಟ್ ಗೆ ವಿರುದ್ಧವಾದ ಪ್ರತಿಕ್ರಿಯೆ ಬರುವಾಗಲೇ ನಟ‌ ಶೋಭರಾಜ್ ಪಾವೂರು ತುಳುವಿನಲ್ಲಿ ಸ್ಪಷ್ಟೀಕರಣ ನೀಡಿದ್ದರು‌. ಆದರೆ, ಆ ಬಳಿಕ‌ವೂ ನೆಟ್ಟಿಗರಿಂದ ಅವಹೇಳನಕಾರಿ, ನಿಂದನೆಯ ನೂರಾರು ಕಾಮೆಂಟ್ ಗಳು ಬಂದಿವೆ‌. ಇದರಿಂದ ಸಂಕಷ್ಟಕ್ಕೊಳಗಾದ ಅವರು, ತಮ್ಮ ಪೋಸ್ಟ್ ಹಾಗೂ ಸ್ಪಷ್ಟೀಕರಣದ ಪೋಸ್ಟ್ ಅನ್ನು ಡಿಲೀಟ್ ಮಾಡಿ ಮೌನಕ್ಕೆ ಶರಣಾಗಿದ್ದಾರೆ.

ನಟ ಶೋಭರಾಜ್ ಪಾವೂರು ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಗೀತಾ' ಧಾರಾವಾಹಿಯಲ್ಲಿ ಕಾಮಿಡಿ ವಿಲನ್ ರೋಲ್ ನಲ್ಲಿ ಜನರ ಮನ ಗೆದ್ದಿದ್ದು, ಇದಕ್ಕಿಂತ ಮೊದಲು 'ಮಂಗಳೂರು ಹುಡ್ಗಿ- ಹುಬ್ಬಳ್ಳಿ ಹುಡ್ಗ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಅದೇ ರೀತಿ ತುಳು ಸಿನಿಮಾ, ತುಳು ನಾಟಕ‌ ನಟರಾಗಿ, ತುಳು ಸಿನಿಮಾ ನಿರ್ದೇಶಕರಾಗಿ ಹೆಸರು ಮಾಡಿದ್ದರು.

Edited By : Nirmala Aralikatti
Kshetra Samachara

Kshetra Samachara

03/02/2021 07:28 pm

Cinque Terre

22.55 K

Cinque Terre

4

ಸಂಬಂಧಿತ ಸುದ್ದಿ