ಬಂಟ್ವಾಳ: ಎರಡು ವಾರಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ದ್ವಿಚಕ್ರ ವಾಹನ ಕಳವು ಆರೋಪಿ ಮತ್ತೆ ಅಂದರ್

ಬಂಟ್ವಾಳ: ಕೇರಳ, ಕರ್ನಾಟಕದಲ್ಲಿ ಹಲವು ಕೃತ್ಯ ಎಸಗಿದ ಆರೋಪ ಸಹಿತ ದ್ವಿಚಕ್ರ ವಾಹನ ಕಳವು ಪ್ರಕರಣಗಳ ಆರೋಪಿಯೊಬ್ಬನನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂಶಯದ ಮೇಲೆ ಬಂಧಿಸಿದ ಪೊಲೀಸರು ಬಂಧಿತನಿಂದ ಕಳವುಗೈದ ದ್ವಿಚಕ್ರ ವಾಹನ ವಶಪಡಿಸಿದ್ದಾರೆ.

ಕೇರಳ ಮಂಗಲ್ಪಾಡಿ ನಿವಾಸಿ ಆಶ್ರಪ್ ಆಲಿ ಬಂಧಿತ. ಗ್ರಾಮಾಂತರ ಠಾಣಾ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಪೊಳಲಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ದ್ವಿಚಕ್ರವಾಹನ ನಿಲ್ಲಿಸಿ, ನಿಂತುಕೊಂಡಿದ್ದ.

ಪೊಲೀಸ್ ಜೀಪ್ ಕಂಡು ಆರೋಪಿ ಓಡಿ ಹೋಗಲು ಪ್ರಯತ್ನಿಸಿದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಹಿಡಿದು ವಿಚಾರಿಸಿದಾಗ ಅಡ್ಡೂರಿನಿಂದ ಕಳವು ಮಾಡಿದ ದ್ವಿ ಚಕ್ರ ವಾಹನ ಬಗ್ಗೆ ಮಾಹಿತಿ ನೀಡಿದ್ದಾನೆ.

ಈತನ ವಿರುದ್ಧ ಉಳ್ಳಾಲ, ಕೊಣಾಜೆ ಸಹಿತ ಅನೇಕ ಪೊಲೀಸ್ ಠಾಣೆಗಳಲ್ಲಿ ಕಳವು ಆರೋಪ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಕಳವು ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಈತ ಎರಡು ವಾರಗಳ ಹಿಂದೆ ಜೈಲಿನಿಂದ ಬಿಡುಗಡೆ ಆಗಿದ್ದ.

ಬಿಡುಗಡೆಯಾದ ಕೂಡಲೇ ಈತ ಹಳೆಚಾಳಿ ಮುಂದುವರಿಸಿದ್ದು, ಅಡ್ಡೂರಿನಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದಾಗಿ ಆರೋಪಿಸಲಾಗಿದೆ.

ಬಂಟ್ವಾಳ ಗ್ರಾಮಾಂತರ ಠಾಣೆ ಅಪರಾಧ ವಿಭಾಗದ ಎಸ್ ಐ ಸಂಜೀವ ಕೆ., ಎಎಸ್ ಐ ಬಾಲಕೃಷ್ಣ, ಸಿಬ್ಬಂದಿ ಜನಾರ್ದನ, ಸುರೇಶ್, ಪುನೀತ್, ರಾಧಾಕೃಷ್ಣ, ನಜೀರ್, ಮನೋಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Kshetra Samachara

Kshetra Samachara

11 days ago

Cinque Terre

7.34 K

Cinque Terre

0