ಮಂಗಳೂರು: ಮೈದಾನದಲ್ಲಿ ಆಟವಾಡುತ್ತಿದ್ದ 8ರ ಹರೆಯದ ಬಾಲಕನನ್ನು ನಾಲ್ವರ ತಂಡವೊಂದು ಅಪಹರಣ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.
ಉಜಿರೆಯ ಉದ್ಯಮಿಯೊಬ್ಬರ ಪುತ್ರ ನ ಅಪಹರಣ ನಡೆದಿದೆ. ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಬಂದ ತಂಡ ಹಿಂದಿ ಭಾಷೆ ಮಾತನಾಡುತ್ತಿದ್ದು, ಬಾಲಕನನ್ನು ಅಪಹರಿಸಿ ಚಾರ್ಮಾಡಿ ರಸ್ತೆ ಮೂಲಕ ಎಸ್ಕೇಪ್ ಆಗಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಲಕನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Kshetra Samachara
17/12/2020 10:58 pm