ಮೂಡುಬಿದಿರೆ : ಜೈನ ಧರ್ಮದ ಬಗ್ಗೆ ಹಾಗೂ ಜೈನ ಮುನಿ ಪರಂಪರೆಯ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಗಳು ಹರಿದಾಡುತ್ತಿದ್ದು, ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಗೆ ಮೂಡುಬಿದಿರೆ ಜೈನ್ ಮಿಲನ್ ಹಾಗೂ ಜೈನ ಯುವ ಸೇನೆಯ ಪದಾಧಿಕಾರಿಗಳು ದೂರು ನೀಡಿದರು.
ವಾಣಿಶ್ರೀ ಎಂಬ ಫೇಸ್ ಬುಕ್ ಅಕೌಂಟ್ ನಲ್ಲಿ ಜೈನಮುನಿಗಳ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮೂಡುಬಿದಿರೆ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್, ನಿರ್ದೇಶಕ ಜಯರಾಜ್ ಕಂಬಳಿ, ಕೋಶಾಧಿಕಾರಿ ದಿವ್ಯ ವೀರೇಂದ್ರ, ಯುವ ಜೈನ್ ಮಿಲನ್ ಅಧ್ಯಕ್ಷ ನಿತೇಶ್ ಬಳ್ಳಾಲ್, ಅಕ್ಷಯ್ ಕುಮಾರ್ ಜೈನ್, ಪ್ರಶಾಂತ ಅಭಯ್ ಮುಂತಾದವರು ಉಪಸ್ಥಿತರಿದ್ದರು.
Kshetra Samachara
17/12/2020 07:34 pm