ಮಂಗಳೂರು: ಖಾಸಗಿ ಶಾಲೆಯ ಸಿಬ್ಬಂದಿಯೊಬ್ಬ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದ್ದು, ಆರೋಪಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಸುಳ್ಯ ತಾಲೂಕಿನ ದೇವಚಲ್ಲ ಗ್ರಾಮದ ಅನಿಲ್ ಅಮಾನತುಗೊಂಡ ಸಿಬ್ಬಂದಿ. ಆರೋಪಿಯು ಯೆಲಿಮಲೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇತ್ತ ಪಾಪಿ ಅನಿಲ್ ಮತ್ತು ಬಾಲಕಿ ತಂದೆ ಸ್ನೇಹಿತರಾಗಿದ್ದಾರೆ.
ಆರೋಪಿಯು ಬಾಲಕಿಗೆ ಹೊಸ ಬೈಸಿಕಲ್ ತಂದು ಕೊಡುವ ಭರವಸೆ ನೀಡಿದ್ದ. ಹೀಗಾಗಿ ಬೈಸಿಕಲ್ ತುಳಿಯುವುದು ಹೇಗೆ ಎಂದು ಹೇಳಿಕೊಡುವುದಾಗಿ ತಿಳಿಸಿ ಡಿಸೆಂಬರ್ 10ರಂದು ಲೈಂಗಿಕ ಕಿರುಕುಳ ನೀಡಿದ್ದಾನೆ. ಮನೆಗೆ ಬಂದ ನಂತರ ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ನಂತರ ಪೋಷಕರು ಶಾಲಾ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ. ಬಾಲಕಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂಬುದನ್ನು ತಿಳಿದ ಶಾಲಾ ಆಡಳಿತ ಮಂಡಳಿ ಅನಿಲ್‌ನನ್ನು ಅಮಾನತು ಮಾಡಿದೆ.
ಆರೋಪಿ ಅನಿಲ್ ವಿರುದ್ಧ ಸುಬ್ರಮಣ್ಯ ಠಾಣೆಯಲ್ಲಿ ಸೆಕ್ಷನ್ 376 ಹಾಗೂ ಪೊಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
14/12/2020 03:20 pm