ಮುಲ್ಕಿ: ಮುಲ್ಕಿ ಬಸ್ ನಿಲ್ದಾಣ ಬಳಿಯ ಅಕ್ಬರ್ ಎಂಬವರ ಮಾಲಕತ್ವದ ಹೂವಿನ ಅಂಗಡಿಯಲ್ಲಿ ಕಳವಿಗೆ ಯತ್ನ ನಡೆದಿದೆ.
ಮುಲ್ಕಿ ಬಸ್ ನಿಲ್ದಾಣದ ಬಳಿಯಲ್ಲೇ ಅಕ್ಬರ್ ಎಂಬವರ ಹೂವಿನ ಅಂಗಡಿ ಕಳೆದ ಹಲವಾರು ವರ್ಷಗಳಿಂದ ಇದ್ದು, ಶನಿವಾರ ರಾತ್ರಿ ಕಳ್ಳರು ಅಂಗಡಿಯ ಒಳಗಡೆ ಬಾಕ್ಸ್ ನ ಬೀಗ ಮುರಿದು ಹಣಕ್ಕಾಗಿ ಜಾಲಾಡಿದ್ದಾರೆ. ಬಳಿಕ ಏನೂ ಸಿಗದೆ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಮುಲ್ಕಿ ಪರಿಸರದಲ್ಲಿ ನಡೆದ ಕಳ್ಳತನದ ಬಗ್ಗೆ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿರುವಾಗಲೇ ಮತ್ತೆ ಕಳ್ಳತನ ಯತ್ನ ನಡೆದಿರುವುದು ನಾಗರಿಕರಲ್ಲಿ ಭೀತಿ ಹುಟ್ಟಿಸಿದೆ.
Kshetra Samachara
13/12/2020 11:08 pm