ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಳಿನೆಲೆ: ರಾಮ ಪತ್ರೆ ಹೂವು ಕೊಯ್ಯಲು ಕಾಡಿಗೆ ಹೋದ ವ್ಯಕ್ತಿ ಶವ ನದಿಯಲ್ಲಿ ಪತ್ತೆ

ಕಡಬ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಾಗೈಮಲೆ ಎಂಬಲ್ಲಿ ಹರಿಯುತ್ತಿರುವ ಕೋಟೆ ಹೊಳೆಯಲ್ಲಿ ಶವ ಪತ್ತೆಯಾಗಿದ್ದು, ಬಿಳಿನೆಲೆ ಗ್ರಾಮದ ಮೂಲೆಮನೆ ನಿವಾಸಿ ವೆಂಕಪ್ಪ ಗೌಡ (62) ಅವರದೆಂದು ಗುರುತಿಸಲಾಗಿದೆ.

ಈ ಬಗ್ಗೆ ಮೃತ ವೆಂಕಪ್ಪ ಗೌಡ ಅವರ ಮಗ ಸುಬ್ರಹ್ಮಣ್ಯ ಎಂ. ಅವರು ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಡಿ.5 ರಂದು ವೆಂಕಪ್ಪ ಗೌಡರು ನೆರೆಮನೆಯ ಬಾಲಚಂದ್ರ ಅವರೊಂದಿಗೆ ಕಾಡಿನಲ್ಲಿ 'ರಾಮಪತ್ರೆ' ಹೂವು ಕೊಯ್ಯಲು ಹೋಗಿದ್ದಾರೆ. ಕಾಡಿನಲ್ಲಿ ದೂರಕ್ಕೆ ಎಲ್ಲೋ ಹೋಗಿರಬೇಕು ಎಂದು ಭಾವಿಸಿದ ಮನೆಯವರು ಸುಮ್ಮನೆ ಇದ್ದರು ಎನ್ನಲಾಗಿದೆ. ಆದರೆ, ಡಿ. 10 ರಂದು ವೆಂಕಪ್ಪಗೌಡರು ಉಪಯೋಗಿಸುತ್ತಿದ್ದ ಟಾರ್ಚ್ ಲೈಟ್, ಸಿಗರ್‌ಲೈಟ್‌, ವಾಚ್ ಹಾಗೂ ಕತ್ತಿಯನ್ನು ಮನೆಯ ಬಾಗಿಲಿನ ಮೆಟ್ಟಿಲ ಬಳಿ ಯಾರೋ ತಂದಿರಿಸಿರುವುದನ್ನು ಗಮನಿಸಿದ ಮನೆಯವರು, ಅನುಮಾನಗೊಂಡು ಡಿ. 11ರಂದು ನೆರೆಮನೆ ನಿವಾಸಿಗಳು ಹಾಗೂ ಸಂಬಂಧಿಕರು ಸೇರಿ ವೆಂಕಪ್ಪ ಗೌಡರನ್ನು ಕಾಡಿನಲ್ಲಿ ಹುಡುಕುತ್ತಿರುವಾಗ ವೆಂಕಪ್ಪ ಗೌಡರ ಶವ ಬಿಳಿನೆಲೆ ಗ್ರಾಮದ ಬಾಗೈಮಲೆ ಎಂಬಲ್ಲಿ ಹರಿಯುತ್ತಿರುವ ಕೋಟೆ ಹೊಳೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಡಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

12/12/2020 08:42 pm

Cinque Terre

9.16 K

Cinque Terre

0

ಸಂಬಂಧಿತ ಸುದ್ದಿ