ಬಂಟ್ವಾಳ: ಪುಂಜಾಲಕಟ್ಟೆಯ ಮಳಿಗೆಯೊಂದರಲ್ಲಿ ಎರಡು ತಿಂಗಳಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದ ಸುಖಕೀರ್ತಿ ಜೈನ್ ಎಂಬವರ ಸ್ಟುಡಿಯೋವನ್ನು ಡಿ.9ರಂದು ಬೀಗ ತೆರೆದು ನೋಡಿದಾಗ ಕಳವು ಕೃತ್ಯವೆಸಗಿದ ಘಟನೆ ಬೆಳಕಿಗೆ ಬಂದಿದೆ.
ಬೆಳಿಗ್ಗೆ ಸುಮಾರು 9 ಗಂಟೆಗೆ ಅಂಗಡಿ ತೆರೆಯಲು ಹೋದಾಗ ಶಟರಿನ ಬೀಗ ತೆರೆದಿದ್ದು, ಅಂಗಡಿಯ ಒಳಗೆ ಹೋಗಿ ನೋಡಿದಾಗ ನಿಕೋನ್ ಕಂಪೆನಿಯ ಸ್ಟೀಲ್ ಕ್ಯಾಮೆರಾ, ಒನಿಡಾ ಕಂಪೆನಿಯ ಹವಾನಿಯಂತ್ರಿತ ಯಂತ್ರ, ಇನ್ವರ್ಟರ್, ಅಂಬ್ರೆಲ್ಲಾ ಫ್ಲ್ಯಾಶ್, ನಿಕೋನ್ ಪ್ಲಾಸ್, ಶೋಕೇಸ್ ಹಾಗೂ ಅದರಲ್ಲಿದ್ದ ವಸ್ತು, ಕ್ಯಾಶ್ ಟೇಬಲ್, ಸುಮಾರು 15 ಸಾವಿರ ರೂ. ನಗದು ಹಾಗೂ 2 ಗ್ರಾಂ ತೂಕದ 3 ಬಂಗಾರದ ನಾಣ್ಯ , ಸೀಲಿಂಗ್ ಫ್ಯಾನ್,ನಿಕೋನ್ ಸ್ಟೀಲ್ ಕ್ಯಾಮೆರಾ , ನ್ಯಾಷನಲ್ ಫ್ಲ್ಯಾಶ್, ವಿವಿಟರ್ ಫ್ಲ್ಯಾಶ್, ದೇವರ ಸ್ಟ್ಯಾಂಡ್ , ಸ್ಕ್ರೀನ್ ಹಾಗೂ ಪತಂಜಲಿ ಸಂಸ್ಥೆಗೆ ಸೇರಿದ ಸುಮಾರು 8.5 ಲಕ್ಷ ಮೌಲ್ಯದ ವಸ್ತು ಕಳವಾಗಿದೆ ಎಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/12/2020 09:05 am