ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: ಬೈಕ್ ನಲ್ಲಿ ಬಂದ್ರು.. ಮಹಿಳೆಯ 4.5 ಪವನ್ ಚಿನ್ನದ ಸರ ಎಗರಿಸಿ ಪರಾರಿಯಾದ್ರು

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಕಲ್ಲಾಪು ಬಳಿ ಬೈಕಿನಲ್ಲಿ ಬಂದ ಕಳ್ಳರು ಮಾಜಿ ಪಂಚಾಯತ್ ಸದಸ್ಯೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಪರಾರಿಯಾಗಿದ್ದಾರೆ.

ಪಡುಪಣಂಬೂರು ಗ್ರಾಪಂ ಮಾಜಿ ಸದಸ್ಯೆ ಕುಸುಮ ಎಂಬವರು ಕಲ್ಲಾಪಿನ ತಮ್ಮ ಮನೆಯಿಂದ ಪಡುಪಣಂಬೂರು ಗ್ರಾಪಂಗೆ ಕೆಲಸದ ನಿಮಿತ್ತ ನಡೆದುಕೊಂಡು ಬರುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಖದೀಮರು ವಿಳಾಸ ಕೇಳುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಸುಮಾರು 4.5 ಪವನ್ ಚಿನ್ನದ ಸರ ಎಳೆದು ಪರಾರಿ ಯಾಗಿದ್ದಾರೆ.

ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

09/12/2020 07:14 pm

Cinque Terre

13.87 K

Cinque Terre

0

ಸಂಬಂಧಿತ ಸುದ್ದಿ