ಸುಬ್ರಹ್ಮಣ್ಯ : ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿ ಎಣಿಕೆ ಸಂದರ್ಭ ದೇಗುಲದ ಮಹಿಳಾ ಸಿಬ್ಬಂದಿಯೇ ಹಣ ಕದ್ದು ಸಿಕ್ಕಿಬಿದ್ದ ಘಟನೆ ನಡೆದಿದೆ.
ಹುಂಡಿ ಎಣಿಕೆಗಾಗಿ ದೇವಸ್ಥಾನದ ಕೆಲ ಸಿಬ್ಬಂದಿ ಮತ್ತು ಕಾಲೇಜಿನ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು. ದೇವಸ್ಥಾನದ ಸಿಬ್ಬಂದಿ ಗೌರಮ್ಮ ಎಂಬಾಕೆ ಹಣ ಎಣಿಕೆ ಸಂದರ್ಭ ಹಣ ಕದ್ದು ಬಚ್ಚಿಟ್ಟುಕೊಳ್ಳುವುದು ಭದ್ರತಾ ಸಿಬ್ಬಂದಿಯೋರ್ವರಿಗೆ ಗೊತ್ತಾಯಿತೆನ್ನಲಾಗಿದೆ.
ಹಣ ಕದಿಯುವುದನ್ನು ಖಾತ್ರಿ ಪಡಿಸಿಕೊಂಡ ಮೇಲೆ ಈ ವಿಚಾರ ಮೇಲಧಿಕಾರಿಗಳಿಗೆ ತಿಳಿಸಲಾಗಿದ್ದು, ಅವರು ಆ ಮಹಿಳೆಯನ್ನು ತನಿಖೆ ನಡೆಸಿದಾಗ ಮಹಿಳೆ ಹಣ ಅಡಗಿಸಿಟ್ಟಿಕೊಂಡಿರುವುದು ಗೊತ್ತಾಗಿ ಅವರಲ್ಲಿ ಸುಮಾರು 10,640 ರೂ. ಪತ್ತೆಯಾಯಿತು.
ಬಳಿಕ ಮಹಿಳೆಯನ್ನು ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಲಾಗಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/12/2020 11:50 am