ವಿಟ್ಲ: ವಿಟ್ಲ ಪರಿಸರದಲ್ಲಿ ಹುಚ್ಚುನಾಯಿಗಳ ಕಾಟ ಹೆಚ್ಚಾಗಿದ್ದು, ಶುಕ್ರವಾರ ಏಳು ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.
ಹುಚ್ಚುನಾಯಿ ದಾಳಿಗೆ ಒಳಗಾದವರನ್ನು ಚಂದಳಿಕೆ ನಿವಾಸಿ ಅಹರಾಜ್(6), ಬೊಬ್ಬೆಕೇರಿ ನಿವಾಸಿ ಮೌಸೀಫ್(16), ಇರಾ ನಿವಾಸಿ ಮುಸ್ತಫಾ(31), ವಿಟ್ಲ ಕಸಬಾ ನಿವಾಸಿ ಅನಿರುದ್ಧ್ (27), ಕಡಂಬು ನಿವಾಸಿ ರಾಧಾಕೃಷ್ಣ(52), ಅಳಿಕೆ ನಿವಾಸಿ ಭಾಸ್ಕರ್(49) ಎಂದು ತಿಳಿದು ಬಂದಿದ್ದು, ಎಲ್ಲರೂ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು.
ಈ ಪೈಕಿ ಗಂಭೀರ ಗಾಯಗೊಂಡಿರುವ ಇಬ್ಬರು ಪುತ್ತೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Kshetra Samachara
04/12/2020 10:44 pm