ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಮೀನು ಮಾರುಕಟ್ಟೆಯಲ್ಲಿ ವ್ಯಕ್ತಿಯೋರ್ವ ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರಿಗೆ 100 ರೂ. ಹಾಗೂ 200 ರೂ. ಮುಖಬೆಲೆಯ ನೋಟುಗಳನ್ನು ನೀಡಿ ವಂಚನೆ ಮಾಡಿದ ಬಗ್ಗೆ ಮಹಿಳೆಯರು ದೂರಿದ್ದಾರೆ.
ವಂಚಕ ವ್ಯಕ್ತಿಯು ಮೀನು ವ್ಯಾಪಾರ ಮಾಡಿ ನೂರು ರೂಪಾಯಿಯ 5 ನೋಟುಗಳಲ್ಲಿ ಆಟಿಕೆಯ ನೋಟನ್ನು ಇಟ್ಟು ಮಹಿಳೆಯರಿಗೆ ಮೋಸ ಮಾಡಿದ್ದಾನೆ. ಹಾಗೆ ಕೆಲದಿನಗಳ ಹಿಂದೆ ಇನ್ನೊಬ್ಬ ವ್ಯಕ್ತಿ ಬಂದು ಮೀನು ತೆಗೆದುಕೊಂಡು 200 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಆಟಿಕೆಯ 200 ರೂ. ಇಟ್ಟು ಮೋಸ ಮಾಡಿದ್ದಾನೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಮಾರುಕಟ್ಟೆಯಲ್ಲಿ ಜನಸಂದಣಿ ವ್ಯಾಪಾರ ನಡೆಸುತ್ತಿರುವಾಗ ಗಮನಿಸಿಕೊಂಡು ವಂಚಕರು ಬಂದು ಮೀನು ಮಾರಾಟದ ಮಹಿಳೆಯರನ್ನು ಮೋಸ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕಿನ್ನಿಗೋಳಿಯಲ್ಲಿ ಕೂಡ 100 ಹಾಗೂ 200 ರೂಪಾಯಿ ಮುಖಬೆಲೆಯ ಜೆರಾಕ್ಸ್ ನೋಟುಗಳ ಮೂಲಕ ಅನೇಕರಿಗೆ ವಂಚಿಸಿದ ಬಗ್ಗೆ ಪಂಚಾಯತ್ ಸದಸ್ಯ ಜೀವನ ಅಂಗರಗುಡ್ಡೆ ನಾಗರಿಕರಿಗೆ ಜಾಗೃತರಾಗಿರುವಂತೆ ಸೂಚಿಸಿದ್ದರು. ಆಟಿಕೆಯ ನೋಟ್ ನೀಡಿ ವಂಚನೆ ಬಗ್ಗೆ ಮಹಿಳೆಯರು ಮುಲ್ಕಿ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
Kshetra Samachara
02/12/2020 10:35 pm