ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪರ್ಸೀನ್ ಬೋಟ್ ದುರಂತ; ಮೂವರು ಮೀನುಗಾರರ ಮೃತದೇಹ ಪತ್ತೆ

ಮಂಗಳೂರು: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್ ದುರಂತದಲ್ಲಿ ಸಮದ್ರ ಪಾಲಾಗಿದ್ದ ಆರು ಜನ ಮೀನುಗಾರರ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಿವೆ.

ಬೊಕ್ಕಪಟ್ಣ ನಿವಾಸಿಗಳಾದ ಪಾಂಡುರಂಗ ಸುವರ್ಣ (58), ಪ್ರೀತಂ (25), ಬೆಂಗ್ರೆ ನಿವಾಸಿ ಚಿಂತನ್ (21) ಎಂಬವರ ಮೃತದೇಹ ಪತ್ತೆಯಾಗಿದ್ದು, ಉಳಿದಂತೆ ಕಸಬ ಬೆಂಗ್ರೆ ನಿವಾಸಿಗಳಾದ ಮಹಮ್ಮದ್ ಹಸೈನಾರ್ (28), ಮಹಮ್ಮದ್ ಅನ್ಸಾರ್(32), ಝಿಯಾವುಲ್ಲಾ(36) ಎಂಬ ಮೀನುಗಾರರು ನಾಪತ್ತೆಯಾಗಿದ್ದಾರೆ.

ಬೋಳಾರದ ಪ್ರಶಾಂತ್ ಎಂಬವರ ಮಾಲಕತ್ವದ ‘ಶ್ರೀರಕ್ಷಾ’ ಹೆಸರಿನ ಪರ್ಸೀನ್ ಬೋಟು ಸೋಮವಾರ ಮುಂಜಾವ 5 ಗಂಟೆ ಸುಮಾರಿಗೆ ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿತ್ತು. ಇದರಲ್ಲಿ 25 ಮಂದಿ ಮೀನುಗಾರರು ಇದ್ದರು. ಮೀನುಗಾರಿಕೆ ನಡೆಸಿ ಹಿಂದಿರುಗುತ್ತಿದ್ದ ವೇಳೆ ಭಾರಿ ಪ್ರಮಾಣದಲ್ಲಿ ಮೀನು ತುಂಬಿದ್ದ ಈ ಬೋಟ್ ಜೋರುಗಾಳಿ ಹಾಗೂ ಅಬ್ಬರದ ಅಲೆಗಳ ಪ್ರಹಾರಕ್ಕೆ ಮುಳುಗಿದೆ. ಈ ವೇಳೆ 25 ಮೀನುಗಾರರ ಪೈಕಿ 19 ಮಂದಿ ಸಣ್ಣ ದೋಣಿ ( ಡಿಂಗಿ) ಮೂಲಕ ದಡ ಸೇರಿದ್ದರು. ಆರು ಮಂದಿ ನಾಪತ್ತೆಯಾಗಿದ್ದರು.

Edited By : Vijay Kumar
Kshetra Samachara

Kshetra Samachara

01/12/2020 08:36 pm

Cinque Terre

17.01 K

Cinque Terre

1

ಸಂಬಂಧಿತ ಸುದ್ದಿ