ಭಟ್ಕಳ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುರುಡೇಶ್ವರ ಸಮುದ್ರದಲ್ಲಿ ಬೆಂಗಳೂರಿನ ಬಾಣಸಂದ್ರ ನಿವಾಸಿ ಮಂಜುನಾಥ್ ವೆಂಕಟೇಶ್ ಮಡಿವಾಳ (20) ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಮೃತ ಮಂಜುನಾಥ್ ವೆಂಕಟೇಶ್ ತನ್ನ ಏಳು ಜನ ಸ್ನೇಹಿತರೊಂದಿಗೆ ಈಜುತ್ತಿರುವಾಗ ಈ ದುರ್ಘಟನೆ ನಡೆದಿದೆ. ಈಜಲು ಸಮುದ್ರಕ್ಕೆ ಇಳಿದಿದ್ದ ಈ ಏಳು ಜನರ ಪೈಕಿ ಮಂಜುನಾಥ್ ಅವರನ್ನು ಹೊರತು ಪಡಿಸಿ ಉಳಿದವರು ನೀರಿನಿಂದ ಮೇಲೆ ಬಂದಿದ್ದರು. ಆದರೆ ಮಂಜುನಾಥ್ ಅಲೆಗಳ ರಭಸಕ್ಕೆ ಸಿಲುಕಿ ಜೀವನ್ಮರಣ ಹೋರಾಟದಲ್ಲಿದ್ದಾಗ ದಡದಲ್ಲಿದ್ದ ಮೀನುಗಾರರು ಗಮನಿಸಿ ಅವರ ರಕ್ಷಣೆ ಮಾಡಿ ಸಮುದ್ರದಿಂದ ಮೇಲೆ ತಂದಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತ ಪಟ್ಟಿದ್ದಾರೆ.
ಮಂಜುನಾಥ್ ಬೆಂಗಳೂರಿನಲ್ಲಿ ವೈದ್ಯಕೀಯ ಸೇವೆಯಲ್ಲಿದ್ದರು. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/11/2020 09:20 pm