ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿಸಿ, ಮತಾಂತರಿಸಿ ಮದುವೆಯಾಗಿ ಕೈಕೊಟ್ಟ ಯುವಕ; ಲವ್ ಜಿಹಾದ್ ಶಂಕೆ!?

ಮಂಗಳೂರು: ಪ್ರೀತಿಸಿ, ಮತಾಂತರಗೊಳಿಸಿ ಮದುವೆ ಮಾಡಿಕೊಂಡ ಯುವಕನೊಬ್ಬನಿಂದ ತನಗೆ ಅನ್ಯಾಯವಾಗಿದೆ ಎಂದು ಯುವತಿಯೊಬ್ಬಳು ತನ್ನ ಅಳಲನ್ನು ಮಾಧ್ಯಮದ ಮುಂದಿಟ್ಟಿದ್ದಾರೆ. ಘಟನೆ ಹಿಂದೆ ಲವ್ ಜಿಹಾದ್ ಶಂಕೆಯೂ ವ್ಯಕ್ತವಾಗಿದೆ.

ಆಸಿಯಾ ಇಬ್ರಾಹಿಂ ಯಾನೆ ಶಾಂತಿ ಜೂಬಿ ಎಂಬವರೇ ತನ್ನ ಪತಿ ಸುಳ್ಯದ ಇಬ್ರಾಹಿಂ ಖಲೀಲ್ ನಿಂದ ಅನ್ಯಾಯಕ್ಕೀಡಾದವರು.

ಕೇರಳದ ಕಣ್ಣೂರಿನ ಪ್ರತಿಷ್ಠಿತ ಹಿಂದೂ ಸಮುದಾಯದ ಯುವತಿ ಶಾಂತಿ ಜೂಬಿ, ಫೇಸ್ಬುಕ್ ನಲ್ಲಿ ಪರಿಚಯವಾದ ಇಬ್ರಾಹಿಂ ಖಲೀಲ್ ಜೊತೆ 2017 ರಲ್ಲಿ ಬೆಂಗಳೂರಿನಲ್ಲಿ ಮದುವೆ ಮಾಡಿಕೊಂಡಿದ್ದರು.

ಎರಡೂ ಕುಟುಂಬಗಳಿಗೂ ಗೊತ್ತಿಲ್ಲದಂತೆ ಮದುವೆ ನಡೆದಿತ್ತು. ಮದುವೆಗೂ ಮೊದಲೇ ಶಾಂತಿ ಜೂಬಿ, ಇಬ್ರಾಹಿಂ ಖಲೀಲ್ ಒತ್ತಾಯಕ್ಕೆ ಮಣಿದು ಇಸ್ಲಾಂ ಗೆ ಮತಾಂತರಗೊಂಡಿದ್ದರು.

2020 ರ ವರೆಗೆ ಇವರಿಬ್ಬರ ಸಂಸಾರ ನೌಕೆ ಚೆನ್ನಾಗಿಯೇ ಸಾಗಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಇಬ್ರಾಹಿಂ ಖಲೀಲ್ ಮನೆಯವರಿಗೆ ವಿಷಯ ತಿಳಿದು ಇಬ್ರಾಹಿಂ ಸಹೋದರ ಶಿಹಾಬ್, ಶಾಂತಿ ಜೂಬಿ ಯಾನೆ ಆಸಿಯಾ ಅವರಿಗೆ ಕೊಲೆ ಬೆದರಿಕೆ ಒಡ್ಡಿದ್ದು, ನೀವಿಬ್ಬರು ಜೊತೆಗಿರಕೂಡದು ಎಂದು ಎಚ್ಚರಿಕೆ ನೀಡಿದ್ದಾನೆ.

ಆದ್ದರಿಂದ ಕಳೆದ ಕೆಲವು ತಿಂಗಳಿನಿಂದ ನ್ಯಾಯಕ್ಕಾಗಿ ಮುಸ್ಲಿಂ ಸಂಘಟನೆ, ಧಾರ್ಮಿಕ ಉಲೆಮಾಗಳ ಮೊರೆ ಹೋದರೂ ಪ್ರಯೋಜನವಾಗಿಲ್ಲ.

ಇನ್ನು ಹಿಂದೂ ಸಂಘಟನೆಗಳು 'ಘರ್ ವಾಪ್ಸಿ' ಆದರೆ ನ್ಯಾಯ ಕೊಡಿಸುವ ಭರವಸೆ ನೀಡುತ್ತಿದ್ದಾರೆ. ಆದರೆ ಮನೆ, ಕುಟುಂಬ ತೊರೆದು ಬಂದಿರುವ ಆಸಿಯಾ ಮರು ಮತಾಂತರಕ್ಕೆ ಮನಸ್ಸು ಮಾಡಿಲ್ಲ. ಬದಲಿಗೆ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದು,‌ ಸದ್ಯ ಆಧುನಿಕ್ ಹ್ಯೂಮನ್ ರೈಟ್ಸ್ ಕಮಿಟಿ ಮೊರೆ ಹೋಗಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

25/11/2020 03:24 pm

Cinque Terre

10.86 K

Cinque Terre

0

ಸಂಬಂಧಿತ ಸುದ್ದಿ