ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಸರಪಾಡಿ ಗ್ರಾಮದ ಮುನ್ನಲಾಯಿಪದವಿನಲ್ಲಿ ಮನೆ ಬೆಂಕಿಗಾಹುತಿ

ಬಂಟ್ವಾಳ: ಸರಪಾಡಿ ಗ್ರಾಮದ ಮುನ್ನಲಾಯಿಪದವು ಎಂಬಲ್ಲಿ ವಸಂತಿ ಎಂಬವರ ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ವಸಂತಿ ಹಾಗೂ ಅವರ ಮನೆಮಂದಿ ಶನಿವಾರ ಸುಳ್ಯಕ್ಕೆ ಸಂಬಂಧಿಕರ ಮನೆಗೆ ಕಾರ್ಯಕ್ರಮದ ನಿಮಿತ್ತ ತೆರಳಿದ್ದರು. ಸೋಮವಾರ ಮುಂಜಾನೆ ಮನೆ ಒಳಗಿನಿಂದ ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಮನೆಯತ್ತ ತೆರಳಿದಾಗ ಮನೆಯೊಳಗೆ ಸಾಮಗ್ರಿ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ತಕ್ಷಣ ಸ್ಥಳೀಯರು ಅಗ್ನಿಶಾಮಕದಳ ಹಾಗೂ ವಸಂತಿಯವರಿಗೆ ಕರೆ ಮಾಡಿ ಮಾಹಿತಿ ನೀಡಿದರು.

ಸ್ಥಳಕ್ಕಾಗಮಿಸಿದ ಆಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಮನೆಯಲ್ಲಿ ವಸಂತಿ ಹಾಗೂ ಅವರ ಮಗಳು,ಆಳಿಯ ಮತ್ತು ಮೊಮ್ಮಕ್ಕಳು ವಾಸಿಸುತ್ತಿದ್ದು,ಮಕ್ಕಳ ಶಾಲಾ ಪುಸ್ತಕ,ಬಟ್ಟೆ ಬರೆ ,ಮನೆಯ ದಾಖಲೆಪತ್ರ, ದವಸಧಾನ್ಯ, ಹಂಚಿನ ಮೇಲ್ಛಾವಣಿ ಸಹಿತ ಇನ್ನಿತರ ಸೊತ್ತು ಬೆಂಕಿಗಾಹುತಿಯಾಗಿದೆ.

ವಸಂತಿಯವರು ಹೊಸಮನೆ ನಿರ್ಮಿಸಲು ಮರಮಟ್ಟು ಸಂಗ್ರಹಿಸಿಟ್ಟಿದ್ದು,ಎಲ್ಲವು ಸುಟ್ಟು ಭಸ್ಮವಾಗಿದೆ. ಸುದ್ದಿ ತಿಳಿದ ಸರಪಾಡಿ ಗ್ರಾಪಂ ಆಡಳಿತಾಧಿಕಾರಿ ಪುಷ್ಪರಾಜ್,ಪಿಡಿಒ ಸಿಲ್ವಿಯಾ ಫರ್ನಾಂಡಿಸ್,ಗ್ರಾಮಕರಣಿಕ ಚೆನ್ನಬಸಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಷ್ಟದ ಬಗ್ಗೆ ಅಂದಾಜಿಸಿದ್ದಾರೆ. ಮಾಹಿತಿ ಪಡೆದಾಕ್ಷಣ ವಸಂತಿಯವರು ಸುಳ್ಯದಿಂದ ವಾಪಸ್ ಬಂದಿದ್ದಾರೆ.

Edited By : Vijay Kumar
Kshetra Samachara

Kshetra Samachara

23/11/2020 07:58 pm

Cinque Terre

9.78 K

Cinque Terre

0

ಸಂಬಂಧಿತ ಸುದ್ದಿ