ಮಂಗಳೂರು: ಬ್ಯಾಂಕ್ ಅಧಿಕಾರಿಯ ಸೋಗಿನಲ್ಲಿ ಎಟಿಎಂ ಕಾರ್ಡ್ ಒಟಿಪಿ ಪಡೆದು ಸಾವಿರಾರು ರೂ. ವಂಚನೆ ಮಾಡಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಲಶೇಖರ ಪಡೀಲ್ ನಿವಾಸಿ ಶೇಖ್ ಸಾಹಿಲ್ ಸಾಹೀಬ್ ಅವರ ತಂದೆಯ ಮೊಬೈಲ್ ಗೆ ಬುಧವಾರ ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿ ಕೊಂಡು ಕರೆ ಬಂದಿದೆ.
ಹೊಸದಾಗಿ ಎಟಿಎಂ ಕಾರ್ಡ್ ಮಾಡದೇ ಇದ್ದರೆ ಬ್ಲಾಕ್ ಆಗಿರುವುದಾಗಿ ಅನಾಮಧೇಯ ವ್ಯಕ್ತಿ ಹೇಳಿದ್ದಾನೆ. ಬ್ಯಾಂಕ್ ಅಧಿಕಾರಿ ಎಂದು ನಂಬಿದ ಇವರು 4 ಬಾರಿ ಬಂದ ಒಟಿಪಿ ನಂಬರ್ ನ್ನು ಕರೆ ಮಾಡಿದ ವ್ಯಕ್ತಿಗೆ ಹೇಳಿದ್ದಾರೆ.
ಸ್ವಲ್ಪದರಲ್ಲೇ ಖಾತೆಯಿಂದ ಹಂತ ಹಂತವಾಗಿ 90,600 ರೂ. ವರ್ಗಾವಣೆಯಾಗಿರುವ ಸಂದೇಶ ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
13/11/2020 10:09 am