ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡೇರಿ: ಮೀನುಗಾರರ ಮಧ್ಯೆ ಘರ್ಷಣೆ ಪ್ರಕರಣ; 14 ಮಂದಿ ಬಂಧನ

ಕೊಡೇರಿ: ಮೀನು ಹರಾಜು ಪ್ರಕ್ರಿಯೆ ವಿಚಾರವಾಗಿ ಕೊಡೇರಿ ಕಿರು ಬಂದರಿನಲ್ಲಿ ನಿನ್ನೆ ಉಪ್ಪುಂದ ಹಾಗೂ ಕೊಡೇರಿ ಮೀನುಗಾರರ ನಡುವೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ.

ನ.7ರಂದು ಉಪ್ಪುಂದ ಗ್ರಾಮದ ಕೊಡೇರಿ ವ್ಯಾಪ್ತಿಯ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಹೋಗಿ ಮೀನು ಹಿಡಿದು ವಾಪಸು ಮೀನು ಖಾಲಿ ಮಾಡಲು ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಣಕ್ಕೆ ಬರುತ್ತಿದ್ದರು.

ಆಗ ಉಪ್ಪುಂದದ ಮೀನುಗಾರರು ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಣಕ್ಕೆ ಬಾರದಂತೆ ಕಿರಿ ಮಂಜೇಶ್ವರ ಗ್ರಾಮದ ಕೊಡೇರಿ ವ್ಯಾಪ್ತಿಯ ಕೆಲವು ವ್ಯಕ್ತಿಗಳು ಸುಮಾರು ಎಂಟತ್ತು ದೋಣಿಗಳನ್ನು ಅಡ್ಡ ಇಟ್ಟು ಮೀನು ವ್ಯಾಪಾರಕ್ಕೆ ತೊಂದರೆ ನೀಡಿದ್ದರು. ಈ ಸಂದರ್ಭ ತಡೆ ಹಿಡಿದಿರುವ ದೋಣಿಗಳನ್ನು ಬಿಡುವಂತೆ ಮನವಿ ಮಾಡಲಾಗಿತ್ತು.

ಆದರೆ, ಅದನ್ನು ಲೆಕ್ಕಿಸದ ಮೀನುಗಾರರು ಪ್ರತಿಭಟನೆಯನ್ನು ಮುಂದುವರಿಸಿ, ಸುಮಾರು 100ರಿಂದ 200 ಜನರು ಸೇರಿಕೊಂಡು ಅನಾವಶ್ಯಕವಾಗಿ ಸರಕಾರಿ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿದ್ದರು. ಈ ಬಗ್ಗೆ ಬೈಂದೂರು ತಹಶೀಲ್ದಾರ್ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘರ್ಷಣೆಗೆ ಸಂಬಂಧಿಸಿ ಕೊಡೇರಿಯ ಸುಮಾರು 14 ಮಂದಿ ಮೀನುಗಾರರನ್ನು ಪೊಲೀಸರು ಬಂಧಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

08/11/2020 11:29 pm

Cinque Terre

7.55 K

Cinque Terre

0

ಸಂಬಂಧಿತ ಸುದ್ದಿ