ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ ತುಂಬೆ ನದಿತೀರದಲ್ಲಿ ಯುವತಿ ಅನುಮಾನಾಸ್ಪದ ಸಾವು

ಮುಲ್ಕಿ: ಮುಲ್ಕಿಯ ಯುವತಿಯೊರ್ವಳು ತುಂಬೆ ನದಿತೀರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

ಮೃತ ಯುವತಿಯನ್ನು ಮುಲ್ಕಿ ಒಡೆಯರ ಬೆಟ್ಟು ನಿವಾಸಿ ಆಶಾ(36) ಎಂದು ಗುರುತಿಸಲಾಗಿದೆ.

ಮೃತ ಯುವತಿ ಭೂವ್ಯವಹಾರ ಸಹಿತ ಅನೇಕ ವಹಿವಾಟು ನಡೆಸುತ್ತಿದ್ದು ಸಾವು ವ್ಯಾಪಕ ಸಂಶಯಕ್ಕೆ ಕಾರಣವಾಗಿದೆ.

ಮುಲ್ಕಿ ಪರಿಸರದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದ ಈಕೆ ಮನೆಗೆ ರಿಕ್ಷಾದಲ್ಲಿ ಬಂದುಹೋಗುತ್ತಿದ್ದರು ಎಂದು ನಿಕಟವರ್ತಿಗಳು ತಿಳಿಸಿದ್ದಾರೆ.

ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದು ಮೈಮೇಲೆ ರಕ್ತದ ಕಲೆಗಳು ಕಂಡುಬಂದಿದೆ ಹೀಗಾಗಿ ಇದು ಕೊಲೆ ಮಾಡಿ ಎಸೆದು ಹೋಗಿರಬಹುದೆಂದು ಶಂಕಿಸಲಾಗಿದೆ.

ಮೃತ ಆಶಾ ಮುಲ್ಕಿಯ ಒಡೆಯರ ಬೆಟ್ಟು ಮನೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದು ಮನೆಯವರು ಮೃತ ಶರೀರ ಪತ್ತೆಯಾದ ಸ್ಥಳ ಬಂಟ್ವಾಳದ ತುಂಬೆ ಗೆ ದಾವಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

07/11/2020 10:30 am

Cinque Terre

7.05 K

Cinque Terre

0

ಸಂಬಂಧಿತ ಸುದ್ದಿ