ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಸೆಂಟ್ರಿಂಗ್ ಶೀಟ್ ಕಳ್ಳತನ; ಆರೋಪಿ ಬಂಧನ

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ಕೊಳುವೈಲು ಎಂಬಲ್ಲಿ ಮನೆಯ ಕಾಮಗಾರಿಗೆ ತಂದಿಟ್ಟಿದ್ದ ಸೆಂಟ್ರಿಂಗ್ ಶೀಟ್ ಹಾಗೂ ಜಾಕ್ ಗಳನ್ನು ಕಳವು ಮಾಡಿದ ವ್ಯಕ್ತಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಉತ್ತರ ಕರ್ನಾಟಕ ಮೂಲದ ಕುಷ್ಟಗಿ ಕೊಪ್ಪಳ ನಿವಾಸಿ ಸುರತ್ಕಲ್ ತಡಂಬೈಲ್ ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಮಂಜುನಾಥ ಅಮರಗಟ್ಟಿ (22) ಎಂದು ಗುರುತಿಸಲಾಗಿದೆ. ಹಳೆಯಂಗಡಿ ಕೊಳುವೈಲು ಎಂಬಲ್ಲಿ ಗುತ್ತಿಗೆದಾರ ಗಂಗಾಧರ ಎಂಬವರು ಕಾಮಗಾರಿ ನಡೆಸಲೆಂದು ಸೆಂಟ್ರಿಂಗ್ ಶೀಟ್ ಹಾಗೂ ಜಾಕ್ ಗಳನ್ನು ತಂದಿಟ್ಟಿದ್ದು, ಯಾರೋ ಕಳವು ಮಾಡಿದ ಬಗ್ಗೆ ಗುತ್ತಿಗೆದಾರ ಗಂಗಾಧರ ಅವರು ಮುಲ್ಕಿ ಠಾಣೆಗೆ ದೂರು ನೀಡಿದ್ದರು. ಕೂಡಲೇ ಮುಲ್ಕಿ ಪೊಲೀಸರು ಕಾರ್ಯಪ್ರವೃತ್ತರಾಗಿ ಸೆಂಟ್ರಿಂಗ್ ಶೀಟ್ ಮತ್ತು ಜಾಕ್ ಕಳ್ಳತನದ ಆರೋಪದ ಮೇಲೆ ಮಂಜುನಾಥನನ್ನು ಬಂಧಿಸಿದ್ದು ಆರೋಪಿಯಿಂದ ಟಾಟಾ ಎಸಿ ವಾಹನ, ಸುಮಾರು 42 ಸೆಂಟ್ರಿಂಗ್ ಶೀಟ್ ಹಾಗೂ 5 ಜಾಕ್ ಗಳನ್ನು ವಶಪಡಿಸಿ, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದೇ ರೀತಿ ಮುಲ್ಕಿ ಸಮೀಪದ ಬಪ್ಪನಾಡು ದೇವಳದ ಎದುರಿನ ಬಡಗುಹಿತ್ಲು ರಸ್ತೆಯಲ್ಲಿ ಕೂಡ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕಾಮಗಾರಿ ನಡೆಸುತ್ತಿದ್ದ ಮನೆಯೊಂದರಿಂದ ಸುಮಾರು 15 ಸೆಂಟ್ರಿಂಗ್ ಸೀಟುಗಳು ಕಳವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

04/11/2020 07:18 pm

Cinque Terre

5.22 K

Cinque Terre

1

ಸಂಬಂಧಿತ ಸುದ್ದಿ