ಮಂಗಳೂರು: ಭೂಗತಪಾತಕಿ ವಿಕ್ಕಿಶೆಟ್ಟಿ ಬಲಗೈ ಬಂಟ, ರೌಡಿಶೀಟರ್ ಆಕಾಶಭವನ ಶರಣ್ ಗೆ ಎನ್ ಕೌಂಟರ್ ಭೀತಿ ಎದುರಾಗಿದೆ.
ಮಂಗಳೂರಿನ ರೌಡಿಶೀಟರ್ ಆಕಾಶಭವನ ಶರಣ್ ಅಲಿಯಾಸ್ ಶರಣ್ ಪೂಜಾರಿ
ಸದ್ಯ ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದಾರೆ. ತುಳು ಚಿತ್ರನಟ ಸುರೇಂದ್ರ ಬಂಟ್ವಾಳ ಮರ್ಡರ್ ಕೇಸ್ ನಲ್ಲಿ ಬಾಡಿ ವಾರಂಟ್ ಪಡೆದು ಬಂಟ್ವಾಳ ಪೊಲೀಸರು ವಿಚಾರಣೆಗೆ ಕರೆ ತರಲಿದ್ದಾರೆ.
ವಿಚಾರಣೆಗೆ ಕರೆ ತಂದಾಗ ಎನ್ ಕೌಂಟರ್ ಮಾಡುತ್ತಾರೆ ಎಂದು ಆಕಾಶಭವನ ಶರಣ್ ನಿಂದ ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ತನ್ನ ಜೀವಕ್ಕೆ ಅಪಾಯ ಇದೆ. ವಿಚಾರಣೆಯಿಂದ ವಿನಾಯಿತಿ ಕೋರಿ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಪತ್ರ ಬರೆದಿದ್ದಾರೆ.
Kshetra Samachara
30/10/2020 11:38 am