ಮಂಗಳೂರು: ಕೆಲಸಕ್ಕೆಂದು ತೆರಳಿದ್ದ ಯುವತಿಯರಿಬ್ಬರು ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ಪ್ರತ್ಯೇಕಪ್ರಕರಣಗಳಲ್ಲಿ ಕಣ್ಣೂರು ನಿವಾಸಿ ಲಕ್ಷ್ಮೀಬಾಯಿ (19), ಹಾಗೂ ಶಕ್ತಿ ನಗರ ನಿವಾಸಿ ರೇಷ್ಮಾ ಡಿಸೋಜ (38) ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ.
ಲಕ್ಷ್ಮೀಬಾಯಿ ಅ.18ರಂದು ಕಣ್ಣೂರು ಗ್ರಾಮ ಬಾಡಿಗೆ ಮನೆಯಿಂದ ಕೆಲಸಕ್ಕೆಂದು ಹೋದವರು ಮನೆಗೆ ವಾಪಸಾಗದೆ ಕಾಣೆಯಾಗಿದ್ದಾರೆ ಎಂದು ಮನೆಯವರು ದೂರು ದಾಖಲಿಸಿದ್ದಾರೆ.
ಶಕ್ತಿ ನಗರ ನಿವಾಸಿ ರೇಷ್ಮಾ ಡಿಸೋಜ ಅ.22ರಂದು ಕೆಲಸಕ್ಕೆಂದು ಮನೆಯಿಂದ ತೆರಳಿದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ ಎಂದು ಮನೆಯವರು ಪ್ರಕರಣ ದಾಖಲಿಸಿದ್ದಾರೆ.
Kshetra Samachara
27/10/2020 11:24 pm