ಬಂಟ್ವಾಳ: ಫೇಸ್‌ಬುಕ್ ಲೈವ್ ಪೇಜ್‌ನಲ್ಲಿ ನಡೆಯುತ್ತಿದ್ದ ಸ್ಪರ್ಧೆಯ ಸ್ಪರ್ಧಿ ಬಾಲಕಿಯೊಬ್ಬಳ ಕುರಿತು ಅದೇ ಪೇಜ್‌ನಲ್ಲಿ ಅಶ್ಲೀಲ ಕಮೆಂಟ್ ಮಾಡಿದ ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ಈ ಕುರಿತು ಸ್ಪರ್ಧೆಯ ಸಂಘಟಕ ಮೋಹನದಾಸ ಕೊಟ್ಟಾರಿ ಅವರು ದೂರು ನೀಡಿದ್ದು, ಆರೋಪಿ ಮುನಿರಾಜು ಎಂಬಾತ ಅಶ್ಲೀಲ ಕಮೆಂಟ್ ಮಾಡಿ, ಬಾಲಕಿಯ ಪ್ರತಿಭೆಗೆ ಧಕ್ಕೆ ತಂದಿದ್ದಾನೆ. ಜತೆಗೆ ಆತನಿಗೆ ಕರೆ ಮಾಡಿ ವಿಚಾರಿಸಿದಾಗ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿಸಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಐಟಿ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ತಂಡ ತನಿಖೆ ನಡೆಸುತ್ತಿದ್ದಾರೆ.
Kshetra Samachara
19/10/2020 08:34 pm