ಮಡಿಕೇರಿ: ರಾತ್ರಿ ವೇಳೆ ಮನೆಯೊಂದಕ್ಕೆ ನುಗ್ಗಿ ಕಳವು ಗೈದಿದ್ದ ಆರೋಪಿಯನ್ನು ಪೊನ್ನಂಪೇಟೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪೊನ್ನಂಪೇಟೆಯ ಚೆನ್ನಂಗಿ ಗ್ರಾಮದ ಸತೀಶ ಎಂಬಾತನನ್ನು ಬಂಧಿಸಿರುವ ಪೊಲೀಸರು, ಆತನಿಂದ ಮೊಬೈಲ್ ಹಾಗೂ 1,350 ರೂ. ವಶಕ್ಕೆ ಪಡೆದಿದ್ದಾರೆ.
ಆರೋಪಿ ಪೊನ್ನಂಪೇಟೆಯ ಡೋಬಿ ಕಾಲೋನಿಯ ಮನೆಯೊಂದಕ್ಕೆ ಕನ್ನ ಹಾಕಿ ಅಲ್ಲಿದ್ದ ಹಣ ಮತ್ತು ಮೊಬೈಲ್ ಕಳವು ಗೈದಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊನ್ನಂಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿ ಕಳವು ಗೈದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪತ್ತೆ ಕಾರ್ಯದಲ್ಲಿ ಪಿಎಸ್‌ಐ ಕುಮಾರ್, ಸಿಬ್ಬಂದಿ ಎಂ.ಡಿ.ಮನು, ಸತೀಶ್, ಕುಶ, ಹರೀಶ್, ಮಹೇಂದ್ರ ಮತ್ತು ಜಾಫ್ರಿ ಪಾಲ್ಗೊಂಡಿದ್ದರು.
Kshetra Samachara
15/10/2020 11:39 pm