ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಮೇಯಲು ಬಿಟ್ಟಿದ್ದ ಆಡು ಕಳವು- ಆರೋಪಿಗಳು ಅಂದರ್

ಮಂಗಳೂರು: ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಮಣ್ಣಮಜಲು ಮಗ್ಗ ಎಂಬಲ್ಲಿ ಕಳವಾಗಿದ್ದ ಆಡುಗಳನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಉಮ್ಮರ್ ಫಾರೂಕ್ ಎಂಬವರು ತಮ್ಮ ಮನೆಯಲ್ಲಿ ಸಾಕುತ್ತಿದ್ದ ಒಂದು ಗಂಡು ಮತ್ತು ಒಂದು ಹೆಣ್ಣು ಆಡನ್ನು ಇಳಂತಿಲ ಕಡವಿನ ಗುಡ್ಡೆ ಎಂಬಲ್ಲಿ ಮೇಯಲು ಬಿಟ್ಟಿದ್ದರು. ಇದೇ ವೇಳೆ ಕಳ್ಳರು ಆಡು ಕದ್ದಿದ್ದರು. ಕಾಣೆಯಾದ ಆಡುಗಳನ್ನು ಎಲ್ಲಾ ಕಡೆ ಹುಡುಕಾಡುವುದರ ಜತೆಗೆ ನೆರೆಕರೆ ಮಂದಿಯಲ್ಲಿ ವಿಚಾರಿಸಿದರೂ ಪತ್ತೆಯಾಗಿರಲಿಲ್ಲ.

ಕೊನೆಗೆ ಮನೆಯವರು ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಉಮ್ಮರ್ ಫಾರೂಕ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿ ತನಿಖೆಗಿಳಿದ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಈರಯ್ಯ ಡಿ. ಎನ್., ಸಿಬ್ಬಂದಿ ಎ.ಎಸ್.ಐ. ಚೋಮ, ಕುಶಾಲಪ್ಪ, ಹಿತೋಶ್ ಕುಮಾರ್, ಇರ್ಷಾದ್ ಪಿ., ರೇವಣ್ಣ, ಯೋಗೀಶ್ , ಚಂದ್ರಶೇಖರ ಪಿ. ಅವರ ತಂಡ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Vijay Kumar
Kshetra Samachara

Kshetra Samachara

15/10/2020 09:23 pm

Cinque Terre

6.07 K

Cinque Terre

0

ಸಂಬಂಧಿತ ಸುದ್ದಿ