ಶಿವಮೊಗ್ಗ: 50 ಲಕ್ಷ ರೂ.ಗೆ ಮಾರಾಟ ಮಾಡಲಾಗಿದ್ದ ನಕ್ಷತ್ರ ಆಮೆಯನ್ನು ಖರೀದಿದಾರನಿಗೆ ನೀಡಲು ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅವರಿಂದ ಒಂದು ನಕ್ಷತ್ರ ಆಮೆಯನ್ನು ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಮೇರೆಗೆ ತಾಲೂಕಿನ ಪುರದಾಳು- ಗಾಡಿಕೊಪ್ಪ ರಸ್ತೆಯಲ್ಲಿ ಇವರನ್ನು ಬಂಧಿಸಲಾಗಿದೆ. ಆಂಧ್ರ ಪ್ರದೇಶದ ಅನಂತಪುರಂ ಮೂಲದ ಯರ್ರಿ ಸ್ವಾಮಿ, ಶಬ್ಬೀರ್ ಬಾಷಾ, ರಾಯಚೂರಿನ ಮುರಳೀಧರ್, ಚಿತ್ರದುರ್ಗದ ಪದ್ಮಾವತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆಮೆಯನ್ನು ಅನಂತಪುರಂನಿಂದ ತರಲಾಗಿತ್ತು ಆದರೆ, ಖರೀದಿದಾರರು ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಪ್ರದೀಪ್ ಹಾಲಭಾವಿ, ಸಾಗರ ಅರಣ್ಯ ಸಂಚಾರಿ ದಳದ ಪಿಎಸ್‌ಐ ಮಲ್ಲಿಕಾರ್ಜುನ ಬಿ., ಡಿಆರ್ ಎಫ್‌ಒ ಅಂತೋಣಿ ರೇಗೊ, ಕೃಪ ಸಾಗರ್.ಸಿ, ಅರಣ್ಯ ರಕ್ಷಕರಾದ ಸಲೀಮ್, ರಮೇಶ್, ರಂಜಿತಾ, ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಗಳಾದ ರಂಗನಾಥ್, ಗಣೇಶ್ ಬಿ., ರತ್ನಾಕರ್ ವಿಶ್ವನಾಥ್ ಕೆ., ಪುಷ್ಪಾ ಫಿಲೋಮಿನಾ ಸಿಕ್ವೇರಾ ಇದ್ದರು.
Kshetra Samachara
13/10/2020 09:55 pm