ಮಂಗಳೂರು: ಕಾರಿನಲ್ಲಿ ಕುಳಿತು ನಕಲಿ ನೋಟುಗಳನ್ನು ಮಾರಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಳ್ಳಾಲ ಪೊಲೀಸರು ಬೀಚ್ ಸಮೀಪದಿಂದ ಬಂಧಿಸಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ.
ಬಂಧಿತ ನಾಲ್ವರನ್ನು ಸೈಯದ್ ಹಕೀಬ್, ಫೈಸಲ್ ಖಾನ್, ಮೊಹಮ್ಮದ್ ಜಮಾನ್ ಮತ್ತು ಹ್ಯಾರಿಸ್ ಎಂದು ಗುರುತಿಸಲಾಗಿದ್ದು, ಪರಾರಿಯಾದವರು ಸಲೀಮ್ ಮತ್ತು ರಂಜಿತ್ ಎಂದು ತಿಳಿದು ಬಂದಿದೆ.
ಆರೋಪಿಗಳಿಂದ ಕಾರು, 5 ಮೊಬೈಲ್ ಫೋನ್ ಹಾಗೂ ಮಾರಾಟಕ್ಕೆ ತಂದಿದ್ದ 2.40 ಲಕ್ಷ ರೂ. ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
13/10/2020 03:37 pm